ಐಕಳದಲ್ಲಿ ಗಣಿಗಾರಿಕೆ ತಹಶೀಲ್ದಾರಗೆ ಗೊತ್ತಿಲ್ಲವೇ ?

ಐಕಳ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಪ್ರತಿದಿನ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಒಂದು ನೂರಕ್ಕಿಂತ ಹೆಚ್ಚು ಲಾರಿಗಳ ಓಡಾಟದಿಂದ ಅಂಗಡಿ, ಹೋಟೆಲ್, ಮನೆಗಳು ಧೂಳಿನಿಂದ ಆವೃತ್ತಗೊಂಡ ಪರಿಣಾಮ ಜನಸಾಮಾನ್ಯರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅಲ್ಲದೆ ಸ್ಪರ್ಧೆಗೆ ನಿಂತಂತೆ ವೇಗವಾಗಿ ಚಲಿಸುವ ಟಿಪ್ಪರ್ ಲಾರಿಗಳನ್ನು ನಿಯಂತ್ರಿಸುವವರೇ ಇಲ್ಲವಾಗಿದೆ.

ಇದರಿಂದ ಈ ರಸ್ತೆಯಿಂದ ಶಾಲೆ ಹೋಗುವ ಮಕ್ಕಳು ಭಯದಿಂದ ತೆರಳುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಪಂಚಾಯತ್ ಆಡಳಿತದ ಗಮನಕ್ಕೆ ತರುವ ಅಂದರೆ ಅಧ್ಯಕ್ಷರು ಕೈಗೆ ಸಿಗುವುದಿಲ್ಲ.  ತಹಶೀಲ್ದಾರರು ಕೂಡ ಒಮ್ಮೆ ದಾಳಿ ನಡೆಸುವ ನಾಟಕ ಮಾಡಿದರೆ ನಂತರ ಮೂರ್ನಾಲ್ಕು ತಿಂಗಳು ಹತ್ತಿರ ಸುಳಿಯದೇ ಕಲ್ಲು ಗಣಿಗಾರಿಕೆಯವರ ಬಗ್ಗೆ ಸಾಫ್ಟ್ ಧೋರಣೆ ತಾಳುತ್ತಿರುವುದರಿಂದಲೇ ಗ್ರಾಮದಲ್ಲಿ ಈ ಪರಿಸ್ಥಿತಿ ಉಂಟಾಗಿದೆ. ಇನ್ನಾದರೂ ಕೂಡಲೇ ಭೂವಿಜ್ಞಾನ ಅಧಿಕಾರಿಗಳು ಈ ಅಕ್ರಮ ಗಣಿಗಾರಿಕೆ ನಡೆಸುವ ಸ್ಥಳಗಳಿಗೆ ಹೋಗಿ ಪರಿಶೀಲಿಸಿ ಕೂಡಲೇ ದಾಳಿ ನಡೆಸಿ ಸೀಜ್ ಮಾಡಬೇಕಾಗಿದೆ.

  • ಎಂ ಚೇತನ್ ಶೆಟ್ಟಿ, ಐಕಳ