ಎಸ್ಸೆಸ್ಸೆಲ್ಸಿ ಪರೀಕ್ಷೆ ಮಿಲಿಟರಿ ಹುದ್ದೆಗೆ ಪರೀಕ್ಷೆಯೇ

ಸಾಂದರ್ಭಿಕ ಚಿತ್ರ

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೊಠಡಿಗೆ ವಿದ್ಯಾರ್ಥಿಗಳು ತಲುಪುವಾಗ ಒಂದು ನಿಮಿಷ ತಡವಾದರೂ ಆ ವಿದ್ಯಾರ್ಥಿಗೆ ಪರೀಕ್ಷಾ ಕೇಂದ್ರದ ಒಳಬಿಡದೇ ಪರೀಕ್ಷೆ ಬರೆಯಲೂ ನಿರಾಕರಿಸಲಾಗುವುದೆಂದು ಪ್ರೌಢಶಾಲೆ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದ್ದು, ಒಂದೊಮ್ಮೆ ಹೀಗಾದರೆ ಇದು ಅಮಾನವೀಯ ಕ್ರಮ.
ಬೆಳಿಗ್ಗೆ ಪಿಕ್ ಅವರ್ಸ್ಸಿನಲ್ಲಿ ವಾಹನಗಳ ದಟ್ಟಣೆ ಇರುವ ಸಂದರ್ಭ ಮಕ್ಕಳು ಪರೀಕ್ಷಾ ಕೊಠಡಿ ತಲುಪಲು ಒಂದಿಷ್ಟು ಸಮಯ ತಡವಾದರೂ ಪರೀಕ್ಷೆ ಬರೆಯಲು ನಿರಾಕರಿಸುವುದು ಎಷ್ಟು ಸರಿ ? ಎಸ್ಸೆಸ್ಸೆಲ್ಸಿ ಪರೀಕ್ಷೆಯೆಂದರೆ ಮಿಲಿಟರಿ ಹುದ್ದೆಗೆ ಪರೀಕ್ಷೆಯೇ

  • ವಿ ಕೆ ನಾಯಕ್  ಮಂಗಳೂರು