ಶೂ ಧರಿಸಲು ಸಹಾಯಕನ ಬಳಸಿದ ಸಿದ್ದರಾಮಯ್ಯ ನೈಜ ಸಮಾಜವಾದಿಯೇ ?

ಮೈಸೂರು : ತಾನೊಬ್ಬ ಸಮಾಜವಾದಿ ಎನ್ನುತ್ತಿರುವ ಸೀಎಂ ಸಿದ್ದರಾಮಯ್ಯರ ವಿರುದ್ಧ ಹಬ್ಲೋಟ್ ಕೈಗಡಿಯಾರ ವಿವಾದವೆದ್ದ ವೇಳೆ ಅವರ ಐಶಾರಾಮಿ ಜೀವನದ ಗುಟ್ಟು ರಟ್ಟಾಗಿದ್ದರೆ ಇದೀಗ ಸಿದ್ದರಾಮಯ್ಯರ ಸಮಾಜವಾದಿ ಬದುಕನ್ನು ಗೇಲಿ ಮಾಡುವಂತಹ ಘಟನೆ ಶನಿವಾರದಂದು ನಡೆದಿದೆ. ಮೈಸೂರು ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಸೀಎಂ ತನ್ನ ಆಪ್ತ ಸಹಾಯಕನನ್ನು ಶೂಗಳನ್ನು ಹಿಡಿದುಕೊಳ್ಳಲು ಬಳಸಿಕೊಂಡಿರುವುದು ಕಂಡುಬಂದಿದೆ.

ಪ್ರಸಿದ್ಧ ನಟ ಚೇತನ್ ರಾವ್ ಪಾರ್ಥಿವ ಶರೀರ ವೀಕ್ಷಿಸಲು ಅವರ ಮನೆಗೆ ಸೀಎಂ ಶುಕ್ರವಾರ ಭೇಟಿ ನೀಡಿದ್ದರು ಎಂದು ಮೂಲಗಳು ಹೇಳಿವೆ. ನಟನಿಗೆ ಭಾವಪೂರ್ಣ ಗೌರವ ಸಲ್ಲಿಸಿದ್ದ ಸೀಎಂ, ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿ, ಮನೆಯಿಂದ ಹೊರಗಡೆ ಬರುವ ಹೊತ್ತಿಗೆ ಯಾರನ್ನೋ ಕಾಯುತ್ತಿದ್ದವರಂತೆ ಕಂಡುಬಂತು. ಅದೇ ಹೊತ್ತಿಗೆ, ಮೈಸೂರಿನ ಅವರ ಮನೆಯಲ್ಲಿದ್ದ ಅವರ ಆಪ್ತ ಸಹಾಯಕ ಕುಮಾರ್, ಶೂಗಳೆರಡನ್ನು ಅಲ್ಲಿಗೆ ತಂದರು. ಅಲ್ಲದೆ ಅವುಗಳನ್ನು ತನ್ನ ಕೈಗಳಿಂದಲೇ ಸಿದ್ದರಾಮಯ್ಯಗೆ ತೊಡಿಸಿದರು. ಈ ದೃಶ್ಯ ಕಂಡು, ಅಲ್ಲಿದ ಹಲವಾರು ಮಂದಿ ಹುಬ್ಬೇರಿಸಿದರು. ಈ ಬಗ್ಗೆ ಸೀಎಂ ತುಟಿ ಪಿಟುಕೆನ್ನಲಿಲ್ಲ.

ಸಿದ್ದರಾಮಯ್ಯರು ತನ್ನವರನ್ನು ಈ ರೀತಿ ಬಳಸಿಕೊಂಡಿರುವುದು ಅತ್ಯಂತ ಅಪೂರ್ವ. ಹಿಂದೆಂದೂ ತಾನು ಇಂತಹ ದೃಶ್ಯ ಕಂಡಿಲ್ಲ ಎಂದಿರುವ ಅವರೊಂದಿಗಿದ್ದ ಕಾಂಗ್ರೆಸಿಗನೊಬ್ಬ, “ಎಲ್ಲರೂ ಸಮಾನ ಎಂದು ಹೇಳುತ್ತಿದ್ದ ಸಿದ್ದರಾಮಯ್ಯರೇ ಈಗ, ಇಂತಹದೊಂದು (ಶೂ ಧರಿಸಲು) ಕೆಲಸಕ್ಕೆ ಇತರರನ್ನು ಬಳಸಿಕೊಂಡಿದ್ದಾರೆ. ಇದರಿಂದ