ಸಲ್ಮಾನ್ ಅದೃಷ್ಟಶಾಲಿಯೇ

ಚಿತ್ರನಟ ಸಲ್ಮಾನ್ ಖಾನ್ ಅದೃಷ್ಟ ಶಾಲಿಯೋ ಅಥವಾ ನಮ್ಮ ನ್ಯಾಯಾಂಗವೇ ಉದಾರವಾದಿಯೋ ಗೊತ್ತಿಲ್ಲ. ಕೃಷ್ಣಮೃಗ ಕೊಂದ ಪ್ರಕರಣದಲ್ಲೂ ಸಲ್ಮಾನ್ ಖುಲಾಸೆಗೊಂಡಿದ್ದಾರೆ. ಆದರೆ ಇದರಿಂದ ಅಚ್ಚರಿಪಡುವಂಥದ್ದೇನಿಲ್ಲ. ಒಂದು ವೇಳೆ ಸಲ್ಮಾನಗೆ ಶಿಕ್ಷೆಯಾಗುತ್ತಿದ್ದರೇ ನಿಜವಾದ ಅಚ್ಚರಿಯ ಸಂಗತಿಯಾಗುತ್ತಿತ್ತು. ಈ ಹಿಂದೆ ಕುಡಿದು ಕಾರು ಚಲಾಯಿಸಿ ಕೆಲವರ ಸಾವಿಗೆ ಕಾರಣರಾದ ಪ್ರಕರಣದಿಂದಲೂ ಸಲ್ಮಾನ್ ಖುಲಾಸೆಗೊಂಡಿದ್ದರು. ಎಲ್ಲಕ್ಕಿಂತ ದುರಂತವೆಂದರೆ ನ್ಯಾಯಾಲಯವು ಕೃಷ್ಣಮೃಗ ಕೊಂದ ಪ್ರಕರಣದ ತೀರ್ಪು ನೀಡಲು 18 ವರ್ಷ ತೆಗೆದುಕೊಂಡದ್ದು. ಇದು ದೀರ್ಘ ಅವಧಿಯಲ್ಲಿ ಸನ್ಮಾನಗೆ ಪುರಾವೆಗಳನ್ನು ತನಗೆ ಬೇಕಾದಂತೆ ಬಗ್ಗಿಸಲು ಸಾಕಷ್ಟು ಕಾಲಾವಕಾಶ ಒದಗಿಸಿತ್ತು. ಅಂದು ಸಲ್ಮಾನ್ ಕಾರಿನಡಿಗೆ ಬಿದ್ದು ಸತ್ತವರಿಗೇ ನ್ಯಾಯ ಸಿಗಲಿಲ್ಲವೆಂದ ಮೇಲೆ ಪಾಪ, ಸತ್ಯ ಕೃಷ್ಣಮ್ಮಗಗಳಿಗೆ ನ್ಯಾಯ ಸಿಗುವುದಾದರೂ ಎಲ್ಲಿಂದ

  • ಕೆ ಸದಾಶಿವ ಬಂಗೇರ  ವಿಟ್ಲ