ನಕಲಿ ವೃದ್ಯರಿಗೆ 100 ರೂಪಾಯಿ ದಂಡ ಸಾಕೇ ? ಕಠಿಣ ಶಿಕ್ಷೆ ವಿಧಿಸಿ

ವೈದ್ಯರಲ್ಲಿ ಹಲವಾರು ಕೆಟಗರಿಗಳಿವೆ. ಅಲೊಪತಿ, ಹೋಮಿಯೊಪತಿ, ಆಯುರ್ವೇದ ಮುಖ್ಯ.  ಹೀಗೆ ಡಿಗ್ರಿ ಹೊಂದಿರುವ ವೈದ್ಯರು ಅಸಲಿಯಾದರೆ ಇತ್ತೀಚೆಗಿನ ದಿನಗಳಲ್ಲಿ ಎಲ್ಲೆಲ್ಲೂ ನಕಲಿ ಡಾಕ್ಟ್ರುಗಳ ಹಾವಳಿ ಜಾಸ್ತಿ ಆಗುತ್ತಿದೆ. ಡಾಕ್ಟರುಗಳ ಕೆಲಸ, ಜವಾಬ್ದಾರಿ ಏನೆಂದರೆ ರೋಗಿಗಳು ಚಿಕಿತ್ಸೆಗಾಗಿ ಹೋದಾಗ ಸರಿಯಾಗಿ ತಪಾಸಣೆ ಮಾಡಿ ಮದ್ದು ಕೊಟ್ಟು ಅವರ ರೋಗ ನಿವಾರಣೆ ಮಾಡುವುದು ಅವರ ಜೀವದ ಆರೋಗ್ಯ ಕಾಪಾಡುವುದು.

ಆದರೆ ನಮ್ಮಲ್ಲಿ ನಕಲಿ ಡಾಕ್ಟ್ರುಗಳಿದ್ದರೆ ರೋಗಗ್ರಸ್ಥರ ಅವಸ್ಥೆ ಏನಾಗಬಹುದು ? ಈ ನಕಲಿ ಡಾಕ್ಟ್ರುಗಳು ಎಲ್ಲಿಂದ ಉದ್ಭವವಾಗುತ್ತಾರೆ ? ಇವರ ಡಿಗ್ರಿ ಏನು ? ಇವರು ಪಡೆದ ಡಿಗ್ರಿ ಅಸಲಿಯೋ ಅಥವಾ ನಕಲಿಯೋ ಎಂಬುದಾಗಿ ಪರಿಶೀಲನೆ ಮಾಡುವವರು ಯಾರು ? ಪರಿಶೀಲನೆ ಮಾಡಿ ಅವರನ್ನು ನಕಲಿ ವೈದ್ಯರೆಂದು ಕಂತು ಬಂದಲ್ಲಿ ಅವರಿಗೆ ಶಿಕ್ಷೆ ಏನು ? ಎಂಬಿತ್ಯಾದಿ ವಿಚಾರಗಳು ಜನರ ಮನದಲ್ಲೆದ್ದು ಎಲ್ಲಾ ಗೊಂದಲಮಯವಾದಂತೆ ಕಂಡು ಬರುತ್ತದೆ.

ರಾಜ್ಯದಲ್ಲಿನ ನಕಲಿ ವೈದ್ಯರ ಸಂಖ್ಯೆ ಹೆಚ್ಚು ಕಮ್ಮಿ 3020. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ 25 ನಕಲಿ ವೈದ್ಯರಿದ್ದಾರೆ ಎಂದರೆ ಯಾರಿಗೂ ಅಚ್ಚರಿಯಾಗಲಿಕ್ಕಿಲ್ಲವೆ ?

ರಾಜ್ಯದಲ್ಲಿ ನಕಲಿ ವೈದ್ಯರನ್ನು ಮಟ್ಟ ಹಾಕಲು ಈಗಿರುವ ಕಾನೂನು ಮಾತ್ರ ದುರ್ಬಲವಾಗಿದೆಯಂತೆ.  ಸೂಕ್ತ ಕಾನೂನು ರೂಪಿಸಲು ಸರಕಾರ ಕ್ರಮ ಕೈಗೊಳ್ಳುವುದು ಯಾವಾಗ ?

ನಕಲಿ ವೈದ್ಯರು ಸಿಕ್ಕಿ ಬಿದ್ದರೆ ಮೊದಲ ಅಪರಾಧಕ್ಕೆ 100 ರೂಪಾಯಿ ದಂಡ, ಎರಡನೇ ಅಪರಾಧಕ್ಕೆ 500 ರೂಪಾಯಿ ದಂಡ. ಮೂರನೇ ಬಾರಿ ಪುನರಾವರ್ತನೆಯಾದರೆ ಒಂದು ಸಾವಿರ ರೂಪಾಯಿ ದಂಡದ ಜತೆಗೆ ಎರಡು ವರ್ಷ ಜೈಲು ಶಿಕ್ಷೆಯಂತೆ. ನಿಜಕ್ಕೂ ಇಂಥ ನಕಲಿ ಡಾಕ್ಟ್ರುಗಳಿಗೆ ಕಠಿಣ ದಂಡ ವಿಧಿಸಿ ನಾಲ್ಕೈದು ವರ್ಷ ಜೈಲು ಶಿಕ್ಷೆ ವಿಧಿಸಿ ಅವರನ್ನು ಇನ್ನು ಮುಂದಕ್ಕೆ ವೈದ್ಯ ವೃತ್ತಿ ಮಾಡಬಾರದಾಗಿ ಕೋರ್ಟು ತೀರ್ಪು ನೀಡಬೇಕು. ಹೀಗಾದರೆ ಮಾತ್ರ ಈ ನಕಲಿ ಡಾಕ್ಟ್ರುಗಳ ಹಾವಳಿ ಕೊನೆಗೊಳಿಸಬಹುದು.

  • ಜೆ ಎಫ್ ಡಿಸೋಜ, ಅತ್ತಾವರ