ಸಲ್ಮಾನ್-ಲುಲಿಯಾ ನಡುವೆ ಏನೂ ಇಲ್ವಾ?

ಸಲ್ಮಾನ್ ಖಾನ್ ಹಾಗೂ ರೊಮಾನಿಯಾ ಬ್ಯೂಟಿ ಲುಲಿಯಾ ವಂಟೂರ್ ಮತ್ತೆ ಸುದ್ದಿಯಲ್ಲಿದ್ದಾರೆ. ನನ್ನ-ಸಲ್ಲು ನಡುವೆ ಯಾವುದೇ ಸಂಬಂಧವಿಲ್ಲ, ನಾವಿಬ್ಬರೂ ಬರೀ ಫ್ರೆಂಡ್ಸ್ ಅಷ್ಟೇ ಎಂದು ಹೇಳುತ್ತಲೇ ಬಂದಿರುವ ಲುಲಿಯಾ ಸಲ್ಲು ಜೊತೆ ಮತ್ತೆ ಕಾಣಿಸಿಕೊಂಡಿದ್ದಾಳೆ. ಸಲ್ಮಾನ್ ಅಂತೂ ಈ ವಿಷಯದ ಬಗ್ಗೆ ಮೌನಿಯಾಗಿದ್ದಾನೆ.
ಕಳೆದ ವೀಕೆಂಡ್ ಸಲ್ಮಾನ್ ಪ್ರಿಯ ಸಹೋದರಿ ಅರ್ಪಿತಾಳ ಮಗು ಅಹಿಲ್‍ನ ಮೊದಲನೇ ವರ್ಷದ ಹುಟ್ಟುಹಬ್ಬ. ಸಲ್ಮಾನನ ಇಡೀ `ಖಾನ್’ದಾನ್ ಮಾಲ್ಡಿವ್ಸ್‍ನಲ್ಲಿ ಸೇರಿತ್ತು. ಸಲ್ಮಾನ್ ತಂದೆ ಸಲೀಂ ಹಾಗೂ ಅವರ ಇಬ್ಬರು ಪತ್ನಿಯರಾದ ಸಲ್ಮಾ, ಹೆಲೆನ್ ಜೊತೆಗೇ ಸಲ್ಲು ಸಹೋದರ ಸಹೋದರಿಯರೆಲ್ಲ ಕುಟುಂಬಸಮೇತ ಅಲ್ಲಿ ಹಾಜರಿದ್ದರು. ಎಲ್ಲಾ ಕುಟುಂಬ ಸದಸ್ಯರ ಜೊತೆಗೆ ಲೂಲಿಯಾ ಕೂಡಾ ಇದ್ದಳು. ಸಲ್ಮಾನ್ ಮನೆಯ ಖಾಯಂ ಸದಸ್ಯೆಯಾಗಿರುವ ಲೂಲಿಯಾ ಸಲ್ಮಾನನಿಗೆ ಇನ್ನೂ ಬರೀ ಸ್ನೇಹಿತೆ ಅಷ್ಟೇನಾ… ತನ್ನ ಎಲ್ಲಾ ಕೆಲಸ ಬಿಟ್ಟು ಸಲ್ಲುವಿನ ಜೊತೆಯಲ್ಲೇ ಇರುವ ಹಕೀಕತ್ತು ಮಾತ್ರ ಅದೇನೋ….