ಕಟೀಲು ದೇವರು ಬಡವರೇ

ದೇವರ ಸ್ಥಳದಲ್ಲಿ ದಾನ ಧರ್ಮ ನಡೆಯುತ್ತಿರುತ್ತದೆ. ಜೊತೆಗೆ ಅಭಿವೃದ್ಧಿ ಕಾರ್ಯಕ್ರಮ ಎಗ್ಗಿಲ್ಲದೇ ನೆರವೇರುತ್ತಿರುತ್ತದೆ ಇದಕ್ಕೆಲ್ಲ ಕ್ಷೇತ್ರದ ಮಹಿಮೆ ಹಾಗೂ ದೇವರ ದಯೆ ಕಾರಣ ಇರುತ್ತದೆ ಕೆಲವು ದೇಗುಲದಲ್ಲಿ ವಿಶೇಷ ಸಂದರ್ಭ ದೇವಿಗೆ ಹರಕೆ ರೂಪವಾಗಿ ಸೀರೆ ಪಟ್ಟೆ ಕೊಡುವ ಕ್ರಮ ಇರುತ್ತದೆ ಅದು ಹೆಚ್ಚಾಗಿ ದೇವಿ ದೇಗುಲಗಳಲ್ಲಿ ಕೆಲವು ದೇವಳಗಳು ಸರ್ಕಾರದ ಅಧೀನದಲ್ಲಿರುತ್ತದೆ ಆದರೆ ಈ ಪುಣ್ಯಕ್ಷೇತ್ರಕ್ಕೆ ವಿವಿಧ ಹರಕೆ ರೂಪದಲ್ಲಿ ಬರುವ ಶೇಷವಸ್ತ್ರವನ್ನು ತುಂಡು ತುಂಡಾಗಿ ಹಂಚುವುದು ಸರಿಯೇ ಎಷ್ಟಾದರೂ ಅದು ಉಡುವುದಕ್ಕೆ ತಾನೇ ಕೊಡುವುದು ಇತ್ತೀಚೆಗೆ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳ ನವರಾತ್ರಿ ದಿನದ ಲಲಿತಾಪಂಚಮಿಯಂದು ಒಂದು ಸೀರೆಯನ್ನು 3 ತುಂಡಾಗಿ ಬಟ್ಟೆಯನ್ನು ಬಟವಾಡೆ ಮಾಡುವುದು ಸರಿಯೇ ಇದಕ್ಕೂ ಸಾಲು ಸಾಲೇ ಭಕ್ತರು ಕ್ಯೂನಲ್ಲಿ ನಿಂತಿರುತ್ತಾರೆ ದೇವಿ ಪ್ರಸಾದ ರೂಪವಾಗಿ ಹಂಚುವ ಶೇಷವಸ್ತ್ರವನ್ನು ಬರೀ ಹೆಂಗಸರಿಗೆ ಮಾತ್ರ ಹಂಚಿದರೆ ಉತ್ತಮವಲ್ಲವೇ ಮಕ್ಕಳಿಗೆ ಗಂಡಸರಿಗೆ ಇದು ಅಗತ್ಯವೇ ಅವಹೇಳನ ಮಾಡುವ ಉದ್ದೇಶ ನನ್ನದಲ್ಲ

  • ಎ ಕೃಷ್ಣಾನಂದ ಶೆಟ್ಟಿ ಐಕಳ