ಜೆಪ್ಪು ಚತುಷ್ಪಥ ರಸ್ತೆ ಡಂಪಿಂಗ್ ಯಾರ್ಡೇ

ಫಾದರ್ ಮುಲ್ಲರ್ ರಸ್ತೆಯಿಂದ ನಂದಿಗುಡ್ಡೆ ಜಂಕ್ಷನ್ನಿನತನಕ ಚತುಷ್ಪಥ ರಸ್ತೆ ನಿರ್ಮಾಣ ಬಗ್ಗೆ ಮನಪಾ ಯೋಜನೆ ಹಾಕಿ ಮೊದಲನೇ ಹಂತದ ಕಾಂಕ್ರಿಟೀಕರಣ ಕಾಮಗಾರಿ  ಫಾದರ್ ಮುಲ್ಲರ್ ಆಸ್ಪತ್ರೆಯಿಂದ ರಿಟ್ರೀಟ್ ಹೌಸಿನತನಕ  ಪೂರ್ತಿಗೊಂಡು ಸರ್ವ ಸಾಧಾರಣ ಒಂದು ವರ್ಷ ಕಳೆದಿದೆ. ಆದರೆ ಇಲ್ಲಿನ ಮೊದಲ ಹಂತದ ಚತುಷ್ಪಥ ರಸ್ತೆ ಕಾಂಕ್ರಿಟೀಕರಣ ಪೂರ್ತಿಗೊಂಡಿಲ್ಲ  ಈಗ ಎರಡನೇ ಹಂತದ ಚತುಷ್ಪಥದ ಕಾಂಕ್ರಿಟೀಕರಣ ಕಾಮಗಾರಿ ಶುರು ಆಗಲೇ ಇಲ್ಲ. ಆವಾಗ ತರಾತುರಿ ವಹಿಸಿ ಕಾಮಗಾರಿ ಶುರು ಮಾಡಿ ಈವಾಗ ಎರಡನೇ ಹಂತದ ರಸ್ತೆ ಚತುಷ್ಪಥ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಮಾಡದೆ ಜಕ್ಕ್ ಬಿದ್ದಿರುವ ಕಾರಣವೇನು
ಇತ್ತೀಚೆಗಿನ ದಿನಗಳಲ್ಲಿ ಸಂತ ಅಂಥೋನಿಯವರ ಆಶ್ರಮದ ಮುಂಭಾಗ ರಸ್ತೆ ಕಾಂಕ್ರಿಟೀಕರಣ ಮಾಡದೆ ಇರುವುದರಿಂದ ಇದೊಂದು ಡಂಪಿಂಗ್ ಯಾರ್ಡಾಗಿ ಪರಿಣಮಿಸಿದೆ  ರಾಶಿ ರಾಶಿ ಮಣ್ಣಿನ ಗುಡ್ಡೆಗಳು ಹಾಗೂ ಮನೆ ಕೆಡವಿದ ಕಲ್ಲು ಮಣ್ಣಿನ ರಾಶಿ ಹಾಕಲಾಗಿದೆ  ಇದು ಜೆಪ್ಪು ವಠಾರದ ಸೌಂದರ್ಯವನ್ನು ಕೆಡಿಸುತ್ತಿದೆ  ಈ ಖಾಲಿ ಸ್ಥಳದಲ್ಲಿ ಕಲ್ಲು ಮಣ್ಣು ತ್ಯಾಜ್ಯ ವಸ್ತುಗಳನ್ನು ಹಾಕುವವರ ಮೇಲೆ ಮನಪಾ ಯಾಕಾಗಿ ಕ್ರಮ ತೆಗೆದುಕೊಳ್ಳದೆ ತೆಪ್ಪಗಿರುವುದು

  • ಜೆ ಎಫ್ ಡಿಸೋಜ  ಅತ್ತಾವರ