ಸಲ್ಮಾನ್-ಕತ್ರೀನಾ ಕ್ಲೋಸ್ನೆಸ್; ಲೂಲಿಯಾ ಅಪ್ಸೆಟ್

ಈ ಬಣ್ಣದ ಲೋಕವೇ ಹೀಗೆ…ಯಾರಿಗೆ ಯಾವಾಗ ಯಾರ ಮೇಲೆ ಒಲವು ಬೆಳೆಯುತ್ತೋ…ಯಾವಾಗ ಬ್ರೇಕಪ್ ಆಗುತ್ತೋ ಹೇಳುವುದು ಕಷ್ಟ. ಒಮ್ಮೆ ಬ್ರೇಕಪ್ ಆದರೂ ಮತ್ತೆ ಅವರು ಒಂದಾಗುವ ಸಾಧ್ಯತೆಯೂ ಇಲ್ಲದಿಲ್ಲ. ಈಗ ಕೆಲವು ಸಮಯಗಳಿಂದ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ನಡುವೆ ಮತ್ತೆ ಪ್ರೀತಿ ಹುಟ್ಟಿಕೊಂಡಿದೆ ಎನ್ನುವ ಸುದ್ದಿ ದಟ್ಟವಾಗಿ ಕೇಳಿಬಂದಿದೆ. ಇದಕ್ಕೆ ಕಾರಣವಾಗಿದ್ದು ಅವರಿಬ್ಬರೂ ಈಗ `ಟೈಗರ್ ಜಿಂದಾ ಹೈ’ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿರುವುದು. ಶೂಟಿಂಗ್ ಮಾತ್ರವಲ್ಲದೇ ಉಳಿದ ಸಮಯವನ್ನೂ ಅವರು ಜೊತೆಯಾಗಿಯೇ ಕಳೆಯುತ್ತಿದ್ದಾರೆ.

ಸಲ್ಮಾನ್ ಹಾಗೂ ಕತ್ರಿನಾ ಒಂದು ಕಾಲದಲ್ಲಿ ಪ್ರೇಮಿಗಳಾಗಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಲ್ಮಾನ್ ಕೆಲವು ಸಮಯ ಜೈಲು ಪಾಲಾದಾಗ ಕತ್ರೀನಾ ರಣಬೀರ್ ಕಪೂರನ ತೆಕ್ಕೆಗೆ ಬಿದ್ದಿದ್ದಳು. ಆದರೂ ಸಲ್ಮಾನ್ ಜೊತೆಗಿನ ಸ್ನೇಹ ಮಾತ್ರ ಮೊದಲಿನಂತೇ ಮುಂದುವರಿದಿತ್ತು. ಈಗ ರಣಬೀರ್ ಆಕೆಗೆ ಕೈಕೊಟ್ಟ ಬಳಿಕ ಮತ್ತೆ ಸಲ್ಮಾನ್-ಕತ್ರೀನಾ ನಡುವೆ ಪ್ರೀತಿ ಚಿಗುರಿದೆ ಎನ್ನಲಾಗಿದೆ. ಕತ್ರೀನಾ ಸಲ್ಲುವಿನಿಂದ ದೂರವಿದ್ದಾಗ ರೋಮ್ಯಾನಿಯನ್ ಚೆಲುವೆ ಲೂಲಿಯಾ ವಂತೂರ್ ಆತನಿಗೆ ಜೊತೆಗಾತಿಯಾಗಿದ್ದಳು. ಹೋದಲ್ಲಿ ಬಂದಲ್ಲಿ ಅವನಿಗೆ ಲೂಲಿಯಾ ಸಾಥ್ ನೀಡುತ್ತಿದ್ದಳು. ಹೆಚ್ಚಾಗಿ ಸಲ್ಮಾನ್ ಮನೆಯಲ್ಲಿಯೇ ಇರುತ್ತಿದ್ದ ಲೂಲಿಯಾ ಜೊತೆ ಸಲ್ಲು ಮದುವೆಯಾಗುತ್ತಾನೆ ಎನ್ನುವವರೆಗೆ ಅವರ ಸಂಬಂಧವಿತ್ತು. ಆದರೆ ಸಲ್ಲು ಏನೇನೋ ಕಾರಣ ನೀಡಿ ಮದುವೆ ಮುಂದೂಡುತ್ತಲೇ ಇದ್ದ. ಇದೀಗ ಕತ್ರೀನಾ ಸಲ್ಲು ಜೀವನ ಮತ್ತೆ ಪ್ರವೇಶಿಸಿದ್ದು ಲೂಲಿಯಾ ಸಿಕ್ಕಾಪಟ್ಟೆ ಅಪ್ಸೆಟ್ ಆಗುವಂತೆ ಮಾಡಿದೆ. ಮೊದಲೆಲ್ಲ ಸಲ್ಮಾನ್ ಚಿತ್ರದ ಸೆಟ್ಟಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಲೂಲಿಯಾ ಈಗ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಮೂಲಗಳ ಪ್ರಕಾರ ಸಲ್ಲು ಈಗ ಲೂಲಿಯಾ ಜೊತೆ ಸಮಯವನ್ನೇ ಕಳೆಯುತ್ತಿಲ್ಲ.ಅದೇನೇ ಇದ್ದರೂ ಫೈನಲಿ ಸಲ್ಲು ಯಾರ ಪಾಲಾಗುತ್ತಾನೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.