ಸಂಸದನ ತಪ್ಪಿನ ಸಮರ್ಥನೆ ಸರಿಯೇ

ಕೊಡಗು ಸಂಸದ ಒಬ್ಬ ಜನಪ್ರತಿನಿಧಿಯಾಗಿದ್ದು ಕಾನೂನು ಪಾಲಿಸಬೇಕಾದವರೇ ಕಾನೂನನ್ನು ಉಲ್ಲಂಘಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಾನೂನು ರಕ್ಷಣೆಗಿರಿಸಿದ್ದ ಬ್ಯಾರಿಕೇಡಿನ ಮೇಲೆ ತನ್ನ ವಾಹನ ಚಲಾಯಿಸಿಕೊಂಡು ಹೋಗಿ ಅನಂತರ ತನ್ನದೇನೂ ತಪ್ಪಿಲ್ಲವೆಂದು ವಾದಿಸುತ್ತಿರುವುದು ವಿಷಾದಕರ ಅದೇ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ಇರುತ್ತಿದ್ದರೆ ಇದೇ ಪ್ರತಾಪಸಿಂಹ ತಮ್ಮ ಪ್ರತಾಪ ತೋರಿಸುತ್ತಿದ್ದರೇ ಕಾಂಗ್ರೆಸ್ ಸರಕಾರ ಇರುವುದರಿಂದ ಈ ಪ್ರತಾಪವೇ ಅದಲ್ಲದೆ ಸಂಸದ ಮಾಡಿದ ತಪ್ಪನ್ನು ಅವರ ಪಕ್ಷದವರು ಸಮರ್ಥಿಸುವುದನ್ನು ಕಂಡಾಗ ಈ ಕಾನೂನು ಕಾಯ್ದೆಯೆನ್ನುವುದು ಜನಸಾಮಾನ್ಯರಿಗೆ ಮಾತ್ರವೇ ಅನ್ವಯಯಿಸುತ್ತದೆಯೇ ಎಂದು ಅಂದು ಕೊಂಡಂತಿದೆ

  • ವಾಸುದೇವ ಎನ್ ಕೆ  ಉಡುಪಿ

LEAVE A REPLY