ಹೊಣೆಗೇಡಿ ಉಡುಪಿ ನಗರಸಭೆ

ಭರವಸೆಯಲ್ಲಿಯೇ ದಿನದೂಡುವ ನಮ್ಮ ಉಡುಪಿ ಮುನಿಸಿಪಾಲಿಟಿಯಲ್ಲಿ ಕೆಲವೊಂದು ಸಮಸ್ಯೆಗಳು ಹಾಗೆನೇ ಇವೆ  ಮುಖ್ಯವಾಗಿ ಇನ್ನೂ ಮುಗಿಯದ ಉಡುಪಿಯ ಮೀನು ಮಾರ್ಕೆಟ್ ಬಿಲ್ಡಿಂಗ್  ಕೆಎಸ್ಸಾರ್ಟಿಸಿ ಬಸ್ ಸ್ಟ್ಯಾಂಡ್  ನರ್ಮ್ ಬಸ್ಸುಗಳ ಸ್ಟ್ಯಾಂಡ್ ಮುಂತಾದವು ನೆನಗುದಿಗೆ ಬಿದ್ದಿವೆ  ರಸ್ತೆಗಳನ್ನು ಮತ್ತು ತೋಡುಗಳನ್ನು ಸರಿಯಾಗಿ ಕ್ಲೀನ್ ಮಾಡುವುದೇ ಇಲ್ಲ  ರಸ್ತೆ ಬದಿಯಲ್ಲಿ ಶೇಖರಿಸಿದ ಹುಲ್ಲು ಕಸಕಡ್ಡಿಗಳನ್ನು ತೆಗೆಸಿ ಕ್ಲೀನ್ ಮಾಡಿಸುವುದೇ ಇಲ್ಲ.ರಸ್ತೆಯ ಇಕ್ಕೆಲಗಳಲ್ಲಿ ನೋ ಪಾರ್ಕಿಂಗ್ ಬೋರ್ಡ್ ಇದ್ದರೂ ಅದು ಪಾಲನೆಯಾಗುತ್ತಿಲ್ಲ
ಈಗಿನ ಉಡುಪಿಯ ಹೊಸ ಹೊಸ ಬಿಲ್ಡಿಂಗುಗಳಲ್ಲಿ ಪಾರ್ಕಿಂಗ್ ಸ್ಪೇಸ್ ಇಲ್ಲವೇ ಇಲ್ಲ  ಅಂತಹ ಬಿಲ್ಡಿಂಗಿಗೆ ಆಕಸ್ಮಾತ್ ಬೆಂಕಿ ಬಿದ್ದರೆ ಹತ್ತಿರದ ಬೇರೆ ಕಟ್ಟಡಗಳು ಸಂಪೂರ್ಣ ನಾಶವಾಗುತ್ತದೆ  ಉಡುಪಿಯ ಆದರ್ಶ ಹಾಸ್ಪಿಟಲ್ ಬದಿಯ ರಸ್ತೆ ಸಾಧಾರಣ ಒಂದೂವರೆ ವರ್ಷದಿಂದ ಪೂರ ಹಾಳಾಗಿ ರಸ್ತೆಯಲ್ಲಿ ಜನರಿಗೆ ನಡೆದಾಡಲು ಕಷ್ಟವಾಗುತ್ತದೆ  ಈಗ ಒಂದೆರಡು ದಿವಸದಿಂದ ಕೆಲವು ರಸ್ತೆಗೆ ಡಾಮರಿನ ಪ್ಯಾಚ್ ವರ್ಕ್ ನಡೆಯುತ್ತಿದೆ  ಮೇಲ್ನೋಟಕ್ಕೆ ಈ ಕೆಲಸ ಜನರನ್ನು ಯಾಮಾರಿಸಲು ಮಾಡುತ್ತಿರುವಂತಿದೆ  ಕೆಲವು ಕಡೆಗಳಲ್ಲಿ ಹಾಕಿದ ತೇಪೆಗೆ ಡಾಮಾರೇ ಇಲ್ಲ. ಇಂಥ ಗುತ್ತಿಗೆದಾರ ಕೆಲಸ ಮಾಡುವವರಿಗೆ ಮುನಿಸಿಪಾಲಿಟಿಯ ಆಶೀರ್ವಾದವಿದೆ

  • ಕೆ ಆರ್ ಪ್ರಸಾದ್  ಉಡುಪಿ