ಆಶೀರ್ವಾದ್ ಸರ್ವೀಸ್ ಬಸ್ಸಿನ ಕಂಡಕ್ಟರ್ ಹೊಣೆಗೇಡಿತನ

ಮಂಗಳೂರಿನಿಂದ ಹೆಜಮಾಡಿಕೋಡಿಗೆ ದಿನಂಪ್ರತಿ ಹೋಗಿ ಬರುವ ಸರ್ವೀಸ್ ಬಸ್ಸಿನಲ್ಲಿ ದಿನಕ್ಕೊಬ್ಬರಂತೆ ಕಂಡೆಕ್ಟರ್  ಪ್ರಯಾಣಿಕರಿಂದ ಬೇರೆ ಬೇರೆ ರೀತಿಯಲ್ಲಿ ಹಣ ವಸೂಲಿ ಮಾಡುತ್ತಿರುವುದೆಲ್ಲ ನಡೆದುಕೊಂಡು ಬರುತ್ತಿದೆ
ಈ ಬಸ್ಸಿನ ಕಂಡೆಕ್ಟರಗೆ ಯೂನಿಫಾರ್ಮ್ ಹಾಕಿಯೇ ಗೊತ್ತಿಲ್ಲ  ಯಾರು ಕಂಡೆಕ್ಟರ್  ಯಾರು ಪ್ರಯಾಣಿಕರೆಂದು ಗೊತ್ತಾಗುತ್ತಿಲ್ಲ
ಮಂಗಳೂರಿನಿಂದ ಹೆಜಮಾಡಿಕೋಡಿ ಕಡೆ ಹೋಗುವ ಈ ಬಸ್ಸಿಗೆ ಸಮಯದ ಪರಿವೇ ಇರುವುದಿಲ್ಲ  ಕಡೆಗೆ ಬಸ್ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಅಲ್ಲಿ ಟ್ರಾಫಿಕ್ ಜಾಮ್ ಹಾಗೆ ಹೀಗೆ ಎಂದೆಲ್ಲ ಹೇಳಿಕೊಂಡು ಟೈಮ್ ತಪ್ಪಿ ಬಂದ ಕೂಡಲೇ ಟೈಪ್ ಕೀಪರ್‍ಗಳು ಬೈಯ್ಯುತ್ತಾರೆ  ಕಡೆಗೆ ಪ್ರಯಾಣಿಕರನ್ನು ಇಳಿಯಲೂ ಬಿಡದೇ  ಬಸ್ ಹತ್ತಲೂ ಬಿಡದೇ ರೈಟ್ ಪೋಯಿ ಎಂದೆಲ್ಲ ಹೇಳುತ್ತಿದ್ದಾರೆ  ಇದರಿಂದ ಈ ಬಸ್ಸಿನಲ್ಲಿ ವಯೋವೃದ್ಧರು  ಮಕ್ಕಳು ಪ್ರಯಾಣಿಸುವುದಾದರೂ ಹೇಗೆ   ಮಂಗಳೂರಿನಿಂದ ಬರುವಾಗ ಚಾಪೆ ಹಾಕಿಕೊಂಡೇ ಬಂದು ಸಮಯ ಸರಿದೂಗಿಸಲೆಂದು ಬಸ್ ಸ್ಟ್ಯಾಂಡಿಗೆ ಬಂದ ಕೂಡಲೇ ಇಳಿಯಲು ಬಿಡದಿದ್ದರೆ ಈ ಬಸ್ಸಿನಲ್ಲಿ ಹೇಗೆ ಪ್ರಯಾಣಿಸುವುದು

  • ಸುಜನ್ ಕರ್ಕೇರ  ತಡಂಬೈಲ್