ದೃಶ್ಯ ಮಾಧ್ಯಮಗಳ ಪಕ್ಷಪಾತ ಹೊಣೆಗೇಡಿತನ

ಕರ್ತವ್ಯದ ಮೇಲಿದ್ದ ವೈದ್ಯರೊಬ್ಬರ ಮೇಲೆ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆ ಹಲ್ಲೆ ಮಾಡಿದ ಪ್ರಕರಣದ ಬಗ್ಗೆ ದೃಶ್ಯ ಮಾಧ್ಯಮ ಜಾಣ ನಿರ್ಲಕ್ಷ್ಯ ತೋರುವ ಮೂಲಕ ಪ್ರಕರಣವನ್ನೇ ಬೆಳಕಿಗೆ ಬಾರದಂತೆ ಮಾಡಿದ್ದು ಸರಿಯೇ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯದ ಮೇಲಿದ್ದ ವೈದ್ಯರ ಮೇಲೆ ಸಂಸದ ಅನಂತಕುಮಾರ ಹೆಗಡೆ ಹಲ್ಲೆ ಮಾಡಿದ ಪ್ರಕರಣದ ಬಗ್ಗೆ ನಮ್ಮ ದೃಶ್ಯ ಮಾಧ್ಯಮ ಜಾಣ ನಿರ್ಲಕ್ಷ್ಯ ತೋರುವ ಮೂಲಕ ಪ್ರಕರಣವನ್ನೇ ಬೆಳಕಿಗೆ ಬಾರದಂತೆ ಮಾಡಿದವು  ಆದರೆ  ಬೆಂಗಳೂರಿನಲ್ಲಿ ಹೊಸ ವರ್ಷದ ಮೊದಲ ದಿನ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಪ್ರಕರಣವನ್ನು ದೃಶ್ಯ ಮಾಧ್ಯಮಗಳವರು ಪದೇ ಪದೇ ಪ್ರಸಾರ ಮಾಡುವ ಮೂಲಕ ಒಬ್ಬರಿಗಿಂತಲೂ ಒಬ್ಬರು ಪೈಪೋಟಿಗೆ ಬಿದ್ದವರಂತೆ ಪ್ರದರ್ಶಿಸಿದರು  ಸಮಾಜದ ಆಗುಹೋಗುಗಳನ್ನು ಜನತೆಗೆ ತಿಳಿಸುವಲ್ಲಿ, ಅಲ್ಲಿನ ತಪ್ಪುಗಳನ್ನು ತಿದ್ದುವುದರಲ್ಲಿ ಮಾಧ್ಯಮಗಳ ಕೊಡುಗೆ ಅಪಾರ  ಆದರೆ ಇದನ್ನು ಅಗತ್ಯವಿದ್ದಷ್ಟು ಮಾತ್ರ ಬಿತ್ತರಿಸಿ ಜನತೆಗೆ ಅರಿವು ಮೂಡಿಸುವುದರೊಂದಿಗೆ ತಪ್ಪಿತಸ್ಥರು ಸಿಗುವವರೆಗೂ ಇದನ್ನು ಮಾಧ್ಯಮ ಗಂಭೀರವಾಗಿ ಪರಿಗಣಿಸುವುದರ ಜತೆ ಜೀವಂತವಾಗಿಡಬೇಕು. ಆದರೆ  ಒಂದೇ ವಿಚಾರವನ್ನು ಪದೇ ಪದೇ ಪ್ರಸಾರ ಮಾಡುವುದು ಎಷ್ಟರಮಟ್ಟಿಗೆ ಸರಿ   ಹಾಗೆ ನೋಡಿದರೆ  ಈ ಎರಡೂ ಪ್ರಕರಣಗಳ ಸೀಸೀಟೀವಿ ಫೂಟೇಜ್ ಇದೆ  ಆದರೂ ಕೇವಲ ಯುವತಿಯೊಬ್ಬಳಿಗೆ ನೀಡಿದ ಲೈಂಗಿಕ ಕಿರುಕುಳದ ದೃಶ್ಯಗಳನ್ನು ಮಾತ್ರ ಮತ್ತೆ ಮತ್ತೆ ತೋರಿಸುತ್ತಾ  ಚರ್ಚಿಸುತ್ತಾ ಹೈಲೈಟ್ ಮಾಡುತ್ತಿರುವ ದೃಶ್ಯ ಮಾಧ್ಯಮ  ಹೆಸರಾಂತ ರಾಜಕಾರಣಿಯೊಬ್ಬನ ಗೂಂಡಾಗಿರಿಯ ಬಗ್ಗೆ ಮೌನವಹಿಸಿರುವುದನ್ನು ನೋಡಿದರೆ  ಮಾಧ್ಯಮಗಳು ರಾಜಕಾರಣಿಗಳಿಗೆ ಮಾರಲ್ಪಟ್ಟಿವೆಯೇನೋ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತದೆ

  • ರಮಾನಂದ ಚೌಟ  ಬೋಳಾರ