ಸೊಸೈಟಿಯಲ್ಲಿ ಕೋಟ್ಯಂತರ ರೂ ವಂಚನೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಉಪ್ಪಳ ಕೈಕಂಬದಲ್ಲಿ ಕಾರ್ಯಾ ಚರಿಸುತ್ತಿರುವ ಮಂಗಲ್ಪಾಡಿ ಪೈವಳಿಕೆ ಅರ್ಬನ್ ಕೋ-ಅಪರೇಟಿವ್ ಸೊಸೈಟಿಯಿಂದ 1 ಕೋಟಿ 65 ಲಕ್ಷದ 33 ಸಾವಿರದ 451 ರೂ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಸೊಸೈಟಿ ಮಾಜಿ ಕಾರ್ಯದರ್ಶಿ ಮಂಜೇಶ್ವರ ಬಾಕ್ರಾ ಬೈಲು ನಿವಾಸಿ ಪ್ರದೀಪ್ (35) ಎಂಬವರ ವಿರುದ್ಧ ಮಂಜೇಶ್ವರ ಪೆÇಲೀಸರ ಕೇಸು ದಾಖಲಿಸಿದ್ದಾರೆ. 18 ನವೆಂಬರ್ 2016ಕ್ಕೆ ಮೊದಲು ಈ ವಂಚನೆ ನಡೆದಿರುವುದಾಗಿ ಸೊಸೈಟಿ ಅಧ್ಯಕ್ಷ ಅಂದುಞÂ ಹಾಜಿ ಮಂಜೇಶ್ವರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.