ಮನಪಾ ಜನನ ಮರಣ ಟ್ರೇಡ್ ಲೈಸನ್ಸ್ ವಿಭಾಗದಲ್ಲಿ ಭಾರಿ ಗೋಲ್ಮಾಲ್ ನಡೀತಿದೆ

ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಅಡಿಯಲ್ಲಿ ಬರುವ ಜನನ ಮರಣ ಹಾಗೂ ಟ್ರೇಡ್ ಲೈಸೆನ್ಸ್ ವಿಭಾಗದಲ್ಲಿ ನಡೆಯುವ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ಪ್ರಮುಖ ಕಾರಣಕರ್ತರು ಹೊರಗುತ್ತಿಗೆಯಿಂದ ಮಹಾನಗರ ಪಾಲಿಕೆಗೆ ಡಾಟಾ ಎಂಟ್ರಿಗಾಗಿ ನೇಮಿಸಿರುವ ಬೆಂಗಳೂರಿನ ಏಜೆನ್ಸಿಯವರ ಸಿಬ್ಬಂದಿಗಳ ಕರಾಮತ್ತು.
ಇವರು ಯಾರ ಹಂಗಿಲ್ಲದೆ ಬೇಕಾ ಬಿಟ್ಟಿಯಾಗಿ ಹಣ ಪಡೆದು ಜನನ, ಮರಣ ಪ್ರಮಾಣ ಪತ್ರವನ್ನು ಬದಲಾಯಿಸುತ್ತಾರೆ.
ಹೊರಗುತ್ತಿಗೆಯ ಸಿಬ್ಬಂದಿಗಳಿಗೆ ಈ ರೀತಿ ಅಧಿಕಾರ ನೀಡಿದವರು ಯಾರು  ಇದರಿಂದ ದೇಶದ ಭದ್ರತೆಗೆ ಬಹಳ ತೊಂದರೆ ಉಂಟಾಗುತ್ತದೆ. ಯಾಕೆಂದರೆ ಈಗಾಗಲೇ ಐಎಸ್ ಉಗ್ರಗಾಮಿಗಳು ಕರಾವಳಿಯತ್ತ ತಮ್ಮ ಕಬಂಧ ಬಾಹು ಬೀರುತ್ತಿದ್ದಾರೆ. ಮಹಾನಗರಪಾಲಿಕೆಯಲ್ಲಿ ಹಣ ಕೊಟ್ಟರೆ ಜನನ, ಮರಣ ಪತ್ರದಲ್ಲಿ ಯಾರ ಹೆಸರನ್ನು ಕೂಡ ಬದಲಾಯಿಸಿಕೊಡುವ ಸವಲತ್ತಿರುವಾಗ ಈ ಉಗ್ರಗಾಮಿಗಳಿಗೆ ಸುಲಭದಲ್ಲಿ ಪಾಸಪೋರ್ಟ್ ಮಾಡಲು ಮತ್ತು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತಮ್ಮ ಸ್ಥಳವನ್ನು ಬದಲಾಯಿಸಲು ಮಹಾನಗರಪಾಲಿಕೆಯು ರತ್ನಗಂಬಳಿಯನ್ನು ಹಾಸುತ್ತಿದೆ. ಟ್ರೇಡ್ ಲೈಸನ್ಸ್ ವಿಭಾಗವು ಕೂಡ ಇದಕ್ಕೆ ಹೊರತಾಗಿಲ್ಲ. ಇಲ್ಲಿ ಹಣ ಕೊಟ್ಟರೆ ಒಂದೇ ದಿವಸದಲ್ಲಿ ಲೈಸನ್ಸ್ ಸಿಗುತ್ತದೆ. ಇವರು ಅವರ ಯಾವ ದಾಖಲೆಗಳನ್ನು ಪರಿಶೀಲಿಸುವುದಿಲ್ಲ. ಕೇವಲ ಹಣವೊಂದಿದ್ದರೆ ಸಾಕು ಕಟ್ಟಡವಿಲ್ಲದಿದ್ದರೂ ಟ್ರೇಡ್ ಲೈಸನ್ಸ್ ಕೊಡುತ್ತಾರೆ. ವಿಪರ್ಯಾಸ ಏನೆಂದರೆ ಈ ವಿಭಾಗದಲ್ಲಿ ಕೆಲಸ ಮಾಡುವರೂ ಕೂಡ ಟೆಂಡರ್ ಮೂಲಕ ಹೊರಗುತ್ತಿಗೆಯ ನೇಮಿಸಿರುವ ಬೆಂಗಳೂರಿನ ಏಜೆನ್ಸಿಯವರ ಸಿಬ್ಬಂದಿಗಳು.
ನಮ್ಮ ಮಂಗಳೂರು ಉತ್ತರ ಮತ್ತು ದಕ್ಷಿಣದ ಶಾಸಕರು ಮತ್ತು ಮೇಯರ್ ಕೇವಲ ರಿಬ್ಬನ್ ಕಟ್ ಮಾಡಲು, ಫ್ಲೆಕ್ಸ್ ರಾಜಕೀಯ ಮಾಡಲು ಮಾತ್ರ ಸೀಮಿತವಾಗಿದ್ದು ಮಹಾನಗರಪಾಲಿಕೆಯಲ್ಲಿ ಇಷ್ಟೆಲ್ಲ ಗೋಲ್ಮಾಲ್ ನಡೆಯುತ್ತಿದ್ದರೂ ಮೌನವಾಗಿದ್ದಾರೆ

  • ಅವಿನಾಶ್  ರಥಬೀದಿ  ಕಾರ್‍ಸ್ಟ್ರೀಟ್