ಮದ್ಯ ವಶ

ಸಾಂದರ್ಭಿಕ ಚಿತ್ರ

ಮಂಜೇಶ್ವರ : ಹಿತ್ತಿಲಲ್ಲಿ ಬಚ್ಚಿಡಲಾಗಿದ್ದ 13 ಪೆಟ್ಟಿಗೆ ವಿದೇಶ ಮದ್ಯವನ್ನು ಕುಂಬಳೆ ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಕುಂಬಳೆ ಬಳಿಯ ಕುಂಟಂಗೇರಡ್ಕದ ನಿರ್ಜನ ಹಿತ್ತಿಲಿನಲ್ಲಿ ಕರ್ನಾಟಕ ನಿರ್ಮಿತ ವಿದೇಶ ಮದ್ಯ ಬಚ್ಚಿಡಲಾಗಿತ್ತು. ಈ ಸಂಬಂಧ ಪೆÇಲೀಸರು ಕೇಸು ದಾಖಲಿಸಿ ತನಿಖೆ ಮುಂದುವರಿಸುತ್ತಿದ್ದಾರೆ.


ಮನೆ, ಕಾರಿಗೆ ಹಾನಿ : ಐವರ ವಿರುದ್ಧ ಕೇಸು

ಕಾಸರಗೋಡು : ಮನೆಗೆ ನುಗ್ಗಿ ಕಿಟಿಕಿ ಗಾಜು ಹಾಗೂ ಕಾರಿಗೆ ಹಾನಿಗೈದು 50 ಸಾವಿರ ರೂ ನಷ್ಟವುಂಟುಮಾಡಿದ ಆರೋಪದಂತೆ ಐದು ಮಂದಿ ವಿರುದ್ಧ ಕುಂಬಳೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮುಜುಂಗಾವು ಬಳಿಯ ಸೂರಂಬೈಲು ನಿವಾಸಿ ಶಿವಪ್ರಸಾದ್ (32) ನೀಡಿದ ದೂರಿನಂತೆ ಅಶೋಕನ್, ಸುನಿಲ್, ಅನಿಲ್, ಪವಿತ್ರನ್ ಹಾಗೂ ಪವಿತ್ರನ್ ಸಹೋದರನ ವಿರುದ್ಧ ಕೇಸು ದಾಖಲಿಸಲಾಗಿದೆಯೆಂದು ಪೆÇಲೀಸರು ತಿಳಿಸಿದ್ದಾರೆ. ಶನಿವಾರ ಶಿವಪ್ರಸಾದ್ ಮನೆಗೆ ಹಾಗೂ ಕಾರಿಗೆ ತಂಡ ದಾಳಿ ನಡೆಸಿತ್ತೆಂದು ದೂರಿನಲ್ಲಿ ಹೇಳಲಾಗಿದೆ.