ವಿಲಿಯರ್ಸ್ ಅಬ್ಬರದ ಆಟ ವ್ಯರ್ಥ ; ಕಿಂಗ್ಸ್ ಇಲೆವೆನ್ ಸತತ 2ನೇ ಗೆಲುವು

  • ಎಸ್ ಜಗದೀಶ್ಚಂದ್ರ ಅಂಚನ್ , ಸೂಟರಪೇಟೆ

ಚುಟುಕು ಕ್ರಿಕೆಟಿನ ಪರಿಣತ ಬ್ಯಾಟ್ಸಮನ್ ಗ್ಲೆನ್ ಮ್ಯಾಕ್ಸ್ ವೆಲ್ ಸಾರಥ್ಯದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೋಮವಾರ ನಡೆದ  ಎರಡನೇ ಪಂದ್ಯವನ್ನು ಗೆದ್ದುಕೊಂಡಿದೆ. ಇಂದೋರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಪಂಜಾಬ್ ಆಟಗಾರರು ಸರ್ವಾಂಗೀಣ ಪ್ರದರ್ಶನದ ಮೂಲಕ ಮಿಂಚಿದರು.

ಮೊದಲ ಪಂದ್ಯದಲ್ಲಿ ಪುಣೆ ವಿರುದ್ಧ ಗೆಲುವು ಪಡೆದು ಟೂರ್ನಿಯಲ್ಲಿ ಉತ್ತಮ ಆಟವಾಡುವ ಭರವಸೆ ಮೂಡಿಸಿರುವ ಕಿಂಗ್ಸ್ ಇಲೆವೆನ್, ಈ ಪಂದ್ಯ ದಲ್ಲಿ  ಎದುರಾಳಿ ಬೆಂಗಳೂರು ತಂಡಕ್ಕೆ ಪೈಪೆÇೀಟಿ ಯನ್ನು ನೀಡಿ 8 ವಿಕೆಟ್ ಗಳ ಗೆಲುವು ಪಡೆದಿದೆ.

ವಿಲಿಯರ್ಸ್ ಸಿಕ್ಸರ್ ವೀರ

ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಎಬಿಡಿ ವಿಲಿಯರ್ಸ್ ಈ ಪಂದ್ಯದಲ್ಲಿ  ಸೊಗಸಾದ ಬ್ಯಾಟಿಂಗ್  ನಡೆಸಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆರ್ ಸಿ ಬಿ ದಾಂಡಿಗರನ್ನು ಕಿಂಗ್ಸ್ ಇಲೆವೆನ್ ಬೌಲರುಗಳು ಸಾಕಷ್ಟು ನಿಯಂತ್ರಿಸಿದರು. ಆದರೆ, ಎಬಿಡಿ ವಿಲಿಯರ್ಸ್ ಒಬ್ಬರೇ ಬ್ಯಾಟಿಂಗಿನಲ್ಲಿ  ಮಿಂಚಿ ಅಜೇಯ 89 ರನ್ ಬಾರಿಸಿ, ನೆರೆದ ಕ್ರಿಕೆಟ್ ಅಭಿಮಾನಿಗಳಿಗೆ  9 ಭರ್ಜರಿ ಸಿಕ್ಸರ್ ರಸದೌತಣ ನೀಡಿದರು. ಐಪಿಎಲ್ ಪಂದ್ಯದಲ್ಲಿ ಇದು ವಿಲಿಯರ್ಸ್ ಅವರ 22ನೇ ಅರ್ಧ ಶತಕ.  ಇವರ ಈ  ಆಟದಿಂದಲೇ ತಂಡದ ಸ್ಕೋರು 148ಕ್ಕೇರಿತು.

ಆರ್ ಸಿ ಬಿ ತಂಡದ ಈ ಸಾಧಾರಣ ಮೊತ್ತ ಕಿಂಗ್ಸ್ ಇಲೆವೆನ್ ತಂಡಕ್ಕೆ  ಸವಾಲೇ ಆಗಲಿಲ್ಲ. ಹಶೀಮ್ ಆಮ್ಲ (58 ರನ್) ಹಾಗೂ ನಾಯಕ ಮ್ಯಾಕ್ಸ್ ವೆಲ್ (43 ರನ್) ಭರ್ಜರಿ ಬ್ಯಾಟಿಂಗ್ ನಡೆಸಿ ಇನ್ನೂ 33 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ  ಗೆಲುವು ತಂದಕೊಟ್ಟರು. ಮ್ಯಾಕ್ಸವೆಲ್ ಕೂಡ 6 ಸಿಕ್ಸರ್ ಬಾರಿಸಿ ಮಿಂಚಿದರು.

ಅಕ್ಷರ್ ಪಟೇಲ್ ಪಂದ್ಯಶ್ರೇಷ್ಠ

 ಐಪಿಎಲ್ ಚುಟುಕು ಕ್ರಿಕೆಟಿನ ಆಟ ಬ್ಯಾಟ್ಸಮನ್ನುಗಳ ಸ್ನೇಹಿ ಎನಿಸಿರುವ ಕಾರಣ ಬೌಲರ್ ಗಳಿಗೆ  ಪ್ರತಿ ಪಂದ್ಯವೂ ಸವಾಲು ಎನಿಸಿದೆ. ಆದರೆ, ಈ ಪಂದ್ಯದಲ್ಲಿ ಮೊದಲ ಬಾರಿಗೆ ಪಂಜಾಬ್  ಬೌಲರುಗಳು ಕರಾರುವಾಕ್ಕಾಗಿ ಬೌಲಿಂಗ್ ನಡೆಸಿ ಗಮನ ಸೆಳೆದರು. ನಿಯಂತ್ರಿತ ಬೌಲಿಂಗ್ ನಡೆಸಿ 4 ಓವರುಗಳಲ್ಲಿ ಎದುರಾಳಿ ದಾಂಡಿಗರಿಗೆ ಕೇವಲ 12 ರನ್ ಬಿಟ್ಟು ಕೊಟ್ಟು ಶೇನ್ ವಾಟ್ಸನ್ ವಿಕೆಟ್ ಪಡೆದ  ಅಕ್ಷರ್ ಪಟೇಲ್ ಪಂದ್ಯ ಶ್ರೇಷ್ಠರಾದರು.