ಮನೆಯಿಂದ 210 ಮಾದಕ ಮಾತ್ರೆ ವಶ

ಮಂಜೇಶ್ವರ : ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದ ಅಮಲು ಪದಾರ್ಥಗಳನ್ನು ವಿವಿಧ ರೂಪದಲ್ಲಿ ಮಾರಾಟಗೈಯ್ಯಲಾಗುತ್ತಿದೆ ಎನ್ನುವ ಸಂಶಯ ಇದೀಗ ಬಲಗೊಂಡಿದ್ದು, ಉದ್ಯಾವರ ಮಾಡ ಪರಿಸರದ ಮನೆಯೊಂದರಿಂದ 210 ಅಮಲು ಬರಿಸುವ ನಿಷೇಧಿತ ಮಾತ್ರೆಗಳನ್ನು ವಶಪಡಿಸಲಾಗಿದೆ.

ಉದ್ಯಾವರ ಮಾಡ  ಪರಿಸರವಾಸಿ ಬಶೀರ್ ಎಂಬಾತನ ಮನೆಯಿಂದ ಅಬಕಾರಿ ದಳ ಬುಧವಾರ ನಡೆಸಿದ ತಪಾಸಣೆಯಲ್ಲಿ 210 ಅಮಲು ಮಾತ್ರೆಗಳನ್ನು ವಶಪಡಿಸಲಾಗಿದ್ದು, ಬಶೀರನ ಮೇಲೆ ದೂರು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಮಂಜೇಶ್ವರ ಪರಿಸರಗಳಲ್ಲಿ ಮಾದಕ ಮಾತ್ರೆಗಳಿಗೆ ಯುವಕರು ಬಲಿಯಾಗುತ್ತಿರುವುದಾಗಿ ಪೆÇಲೀಸರು ಹೇಳುತಿದ್ದಾರೆ.