‘ರಾಜ್ಯ ಮಧ್ಯಂತರ ಚುನಾವಣೆ ನಿಶ್ಚಿತ’

ಈಶ್ವರಪ್ಪ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : “ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ಸಚಿವ ಮಹದೇವಪ್ಪ ಆಪ್ತರ ಬಳಿ ಸಿಕ್ಕ ಕೋಟ್ಯಂತರ ರೂ ಅಕ್ರಮ ಹಣದ ಪ್ರಕರಣ ರಾಜ್ಯ ಸರ್ಕಾರನ್ನು ನಿಶ್ಚಿತವಾಗಿ ಅಧಿಕಾರದಿಂದ ಕೆಳಗಿಳಿಸಲಿದೆ. ರಾಜ್ಯ ಮಧ್ಯಂತರ ಚುನಾವಣೆ ಕಾಣುವುದು ನಿಶ್ಚಿತ” ಎಂದು ಪ್ರತಿಪಕ್ಷದ ನಾಯಕ ಕೆ ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಭಾನುವಾರ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. “ಈ ಅಕ್ರಮ ಹಣದ ಪ್ರಕರಣ ಈಗಾಗಲೇ ಸಿಬಿಐಗೆ ಹಸ್ತಾಂತರವಾಗುತ್ತಿದೆ. ಅಲ್ಲಿ ತನಿಖೆ ನಡೆದರೆ ಈ ಹಣದ ಹಿಂದೆ ಯಾವ ಯಾವ ಮಂತ್ರಿಗಳು  ಇದ್ದಾರೆ, ಈ ಹಣ ಯಾರದ್ದು ಎಲ್ಲವೂ ಗೊತ್ತಾಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಯಾರೆಲ್ಲ ಭ್ರಷ್ಟರನ್ನು ಪೋಷಿಸುತ್ತಿದೆ ಎನ್ನುವುದು ಗೊತ್ತಾಗಲಿದೆ” ಎಂದರು.

“ರಾಜ್ಯದ ವಿದ್ಯಮಾನ ನೋಡಿದರೆ ಇಲ್ಲೊಂದು ಸರ್ಕಾರ ಅಧಿಕಾರಲ್ಲಿದೆಯೇ ಎಂಬುದು ಅರ್ಥವೇ ಆಗುತ್ತಿಲ್ಲ. ಎಲ್ಲ ಕಡೆ ಅರಾಜಕ ವಾತಾವರಣವಿದೆ. ಅಧಿಕಾರಿಗಳಿಗೆ ಮುಖ್ಯಮಂತ್ರಿ ಬೆಂಬಲಿಗರೇ ಧಮಕಿ ಹಾಕಿದರೂ ಕೇಳುವವರಿಲ್ಲ. ಸೀಎಂ ಬೆಂಬಲಿಗರ ಹತ್ತಿರವೇ ಕೋಟ್ಯಂತರ ರೂ ಸಿಕ್ಕಿದೆÉ” ಎಂದರು.

“ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿ ಮತ ವಿಭಜನೆ ಆಗದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕನಸಾಗಿತ್ತು. ಇನ್ನು ಇಂತಹ ತಪ್ಪು ಮಾಡುವುದಿಲ್ಲ. ಎಲ್ಲರೂ ಒಂದಾಗಿ ಚುನಾವಣೆ ಎದುರಿಸುತ್ತೇವೆ” ಎಂದರು.