ಅಂತಾರಾಜ್ಯ ಚೋರ ಸೆರೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕುಖ್ಯಾತ ಅಂತಾರಾಜ್ಯ ಕಳ್ಳನೊಬ್ಬನನ್ನು ಉರ್ವಾ ಠಾಣಾ ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ನಗ, ನಗದು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ದಾವಣಗೆರೆ ನಿವಾಸಿ ಮಂಜುನಾಥ ಎಂದು ಗುರುತಿಸಲಾಗಿದೆ. ಆರೋಪಿ ಮಂಜುನಾಥ ಹಲವು ಕಳವು ಪ್ರಕರಣಗಳನ್ನು ತಮಿಳುನಾಡು, ಕೇರಳದಲ್ಲೂ ನಡೆಸಿದ್ದು, ಅಲ್ಲಿನ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿಯಿಂದ ನಾಲ್ಕು ಬಂಗಾರದ ಬಳೆ, ಎರಡು ಚಿನ್ನದ ನಾಣ್ಯ, ಎರಡು ಬೆಳ್ಳಿ ಉಂಗುರ, 66 ಸಾವಿರ ರೂ ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.