ನಿಗೂಢ ವೃದ್ದೆ ಸಾವು ತನಿಖೆಗೆ ಗೂಡಚಾರ ತಂಡ ಆಗಮನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಇತ್ತೀಚೆಗೆ ಸಾವನ್ನಪ್ಪಿದ ಮೀಂಜ ಚಿಗುರುಪದವು ತೊಟ್ಟೆತ್ತೋಡಿ ನಿವಾಸಿ ಆಯಿಷಾಬಿ (66) ನಿಗೂಢ ಸಾವಿನ ಕುರಿತು ಪೆÇಲೀಸರು ತನಿಖೆ ತೀವ್ರಗೊಳಿಸಿದ ಬೆನ್ನಲ್ಲೇ ಇಮ್ಟಲಿಜೆನ್ಸ್ ಅಧಿಕಾರಿಗಳು ಆಯಿಷಾಬಿ ಮನೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ತಿಂಗಳ 5ರಂದು ಆಯಿಷಾಬಿ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತದೇಹವನ್ನು ಸ್ನಾನ ಮಾಡಿಸುವ ಸಂದರ್ಭ ದೇಹದಲ್ಲಿ ಕಂಡ ಕೆಲವು ಗಾಯದ ಗುರುತುಗಳು ಸಂಶಯಕ್ಕೆ ಕಾರಣವಾಗಿತ್ತು.

ಆಯಿಷಾಬಿ ಸಾವನ್ನಪ್ಪಿದ ಎರಡು ದಿನದಲ್ಲೇ ಪುತ್ರ ಮುಸ್ತಫ ಹಾಗೂ ಆತನ ಇಬ್ಬರು ಪತ್ನಿಯರು ಅವರ ಸಹೋದರಿ ಮನೆಗೆ ತೆರಳುವುದರೊಂದಿಗೆ ಸಂಶಯ ಇನ್ನಷ್ಟು ಪುಷ್ಟಿಗೊಂಡಿದೆ.