ಪೆÇಳಲಿ ದೇವಳ ಜೀರ್ಣೋದ್ಧಾರ ಕಾಮಗಾರಿ ವೇಳೆ ಶಾಸನ ಪತ್ತೆ

ಮ್ಮ ಪ್ರತಿನಿಧಿ ವರದಿ

ಮೂಡಬಿದಿರೆ : ಇತಿಹಾಸ ಪ್ರಸಿದ್ಧ ಪೆÇಳಲಿಯ ಶ್ರೀ ರಾಜರಾಜೇಶ್ವರಿ ದೇವಳದ ಜೀರ್ಣೋದ್ಧಾರ ಕಾಮಗಾರಿ ವೇಳೆ ಸುಮಾರು 900 ವರ್ಷಗಳಷ್ಟು ಹಳೆಯದಾದ, ಕನ್ನಡ ಭಾಷೆ ಮತ್ತು ಲಿಪಿಯ ಶಿಲಾಶಾಸನವೊಂದು ಪತ್ತೆಯಾಗಿದೆ.

ದೇವಾಲಯದ ಗರ್ಭಗೃಹದ ಹೊರಗೆ ಎಡಭಾಗದಲ್ಲಿ ಅಡಿಮೇಲಾಗಿರಿಸಿರುವಂತೆ ಪತ್ತೆಯಾದ ಈ ಶಾಸನ ಫಲಕದ ಹಿಂಭಾಗವನ್ನು ಲೋಹದ ದೇವತಾ ವಿಗ್ರಹಗಳನ್ನು ನಿತ್ಯಾಭಿಷೇಕ ಮಾಡುವ ಪೀಠವಾಗಿ ಬಳಸಲಾಗುತ್ತಿತ್ತು. ಈ ಶಾಸನವನ್ನು ಪರಿಶೀಲಿಸಿ ಅಧ್ಯಯನ ಮಾಡಿದ ಇತಿಹಾಸ ಸಂಶೋಧಕ ಮೂಡುಬಿದಿರೆಯ ಪುಂಡಿಕಾೈ ಗಣಪಯ್ಯ ಭಟ್ಟ ಅವರು ಇದರ ವಿವರಗಳನ್ನು ನೀಡಿದ್ದಾರೆ.

ಆಳುಪ ವಂಶದ ಅರಸನಾದ ಕುಲಶೇಖರನ ಆಳ್ವಿಕೆಯಲ್ಲಿ, ಆತನ ಭೃತ್ಯನಾಗಿದ್ದ ಬಿಳಿವೆಯ ನಂಬಿ ಎಂಬಾತ ಆತ್ಮಾರ್ಪಣೆಯನ್ನು (ವೇಳೆವಾಳಿ) ಮಾಡಿ ವೀರಸಾಹಸವನ್ನು ಮೆರೆದ ವಿಚಾರವನ್ನು ಈ ಶಾಸನ ದಾಖಲಿಸುತ್ತದೆ.

ಸುಮಾರು 38 ಇಂಚು ಎತ್ತರ ಹಾಗೂ ಮೇಲ್ಭಾಗದಲ್ಲಿ ಸುಮಾರು 24 ಇಂಚು ಅಗಲವಿರುವ, ಸುಂದರವಾಗಿ ರೂಪಿಸಲಾದ ಈ ಶಿಲಾಫಲಕದಲ್ಲಿ ಅಕ್ಷರಗಳನ್ನು  20 ಸಾಲುಗಳಲ್ಲಿ ಅತ್ಯಂತ ಸ್ಪುಟವಾಗಿ ಕೆತ್ತಲಾಗಿದೆ. ಶಾಸನ ಫಲಕದ ತಳಭಾಗದಲ್ಲಿ ಎರಡು ಸಿಂಹಗಳ ನಡುವಿನಲ್ಲಿ ಒಬ್ಬ ವ್ಯಕ್ತಿಯು ರಾಜಭಂಗಿಯಲ್ಲಿ ಸ್ತ್ರೀಯೊಬ್ಬಾಕೆಯೊಂದಿಗೆ ಆಸೀನನಾಗಿರುವ ಚಿತ್ರಣವಿದೆ. ಶಾಸನದ ಬರಹವಿರುವ ಭಾಗದ ಮಧ್ಯಭಾಗದಲ್ಲಿ ಯಾವುದೋ ಕಾರಣಕ್ಕಾಗಿ ಕಲ್ಲಿನ ಚೆಕ್ಕೆಗಳನ್ನು ವೃತ್ತಾಕಾರವಾಗಿ ಕೆತ್ತಿ ತೆಗೆಯಲಾಗಿದ್ದು, ಇದರಿಂದಾಗಿ ಕೆಲವು ಮಹತ್ವದ ಅಕ್ಷರಗಳು ನಾಶಗೊಂಡಿದೆ ಎನ್ನಲಾಗಿದೆ.

ಪ್ರಸ್ತುತ ಪೆÇಳಲಿಯಲ್ಲಿ ಬೆಳಕಿಗೆ ಬಂದಿರುವ ಕುಲಶೇಖರ ಪಾಂಡ್ಯ ಪಟ್ಟಿಗ ದೇವನ ಈ ಶಾಸನವು ಆಳುಪಯುಗದ ತುಳುನಾಡಿನ ಇತಿಹಾಸದ ಒಂದು ಮಹತ್ವಪೂರ್ಣ ದಾಖಲೆ ಎಂದು ಅಬಿಪ್ರಾಯಪಡುವ ಗಣಪಯ್ಯ ಭಟ್ಟರು, ಈ ಶಾಸನವನ್ನು ಓದಿ ಅರ್ಥೈಸುವಲ್ಲಿ ನೆರವಾದ ಸಂಶೋಧಕ ಚಿತ್ರದುರ್ಗದ ಬಿ ರಾಜಶೇಖರಪ್ಪನವರ ಸಹಕಾರವನ್ನು ಸ್ಮರಿಸಿದ್ದಾರೆ. ಕಾಮಗಾರಿ ಸಂದರ್ಭ ಶಾಸನರಹಿತವಾದ ಮೂರು ವೀರಗಲ್ಲುಗಳೂ ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.