ಮುಲ್ಕಿ ಪ್ರದೇಶಕ್ಕೆ ಅನ್ಯಾಯವಾಗುತ್ತಿದೆ

ಬೆಳೆಯುತ್ತಿರುವ ಮುಲ್ಕಿ ಈಗೀಗ ಎಲ್ಲಾ ರೀತಿಯಿಂದಲೂ ಅನ್ಯಾಯವಾಗುತ್ತಿರುವುದು ಕಂಡುಬಂದಿದೆ ಕುಂದಾಪುರದಿಂದ ಮಂಗಳೂರಿಗೆ ಬರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಲ್ಲಾ ಕಡೆ ಬೋರ್ಡಿನಲ್ಲಿ ಬ್ರಹ್ಮಾವರಕ್ಕೆ ಉಡುಪಿ ಕಾಪು ಪಡುಬಿದ್ರೆ ಸುರತ್ಕಲ್ ಮಂಗಳೂರಿಗೆ ಇಷ್ಟು ಕಿ ಮೀ ಎಂದು ಬರೆದಿರುತ್ತೀರಿ ಆದರೆ ಎಲ್ಲೂ ಮುಲ್ಕಿ ಇಷ್ಟು ಕಿ ಮೀ ಎಂದು ಬರೆದಿರುವುದಿಲ್ಲ ಆದ್ದರಿಂದ ತಾವು ಕೂಡಲೇ ಕಾರ್ಯಪ್ರವೃತ್ತರಾಗಿ ಮುಲ್ಕಿ ಹೆಸರು ಪ್ರತಿಯೊಂದು ಬೋರ್ಡಿನಲ್ಲಿ ನೊಂದಾಯಿಸುವಂತೆ ಮನವಿ ಅದರಂತೆ ಕುಂದಾಪುರ ಸಾಸ್ತಾನ ಕೋಟೇಶ್ವರ ಬ್ರಹ್ಮಾವರ ಉಡುಪಿ ಉದ್ಯಾವರ ಕಟಪಾಡಿ ಕಾಪು ಎಲ್ಲಾ ಮುಖ್ಯ ಜಂಕ್ಷನ್ನಿನಲ್ಲಿ ಹೈಮಾಸ್ಟ್ ಲೈಟನ್ನು ಹಾಕಿರುತ್ತೀರಿ ಮುಲ್ಕಿ ಮತ್ತು ಹಳೆಯಂಗಡಿ ಪ್ರದೇಶವನ್ನು ಕೈ ಬಿಟ್ಟಿರುತ್ತೀರಿ ಅದರಿಂದ ಮುಲ್ಕಿ ಹಳೆಯಂಗಡಿಗೆ ಹೈ ಮಾಸ್ಟ್ ಲೈಟ್ ತುಂಬಾ ಅಗತ್ಯ ಬಪ್ಪನಾಡು ದ್ವಾರದ ಎದುರು ಹಾಗೂ ಮುಲ್ಕಿ ಬಸ್ ಸ್ಟ್ಯಾಂಡಿನ ಎದುರಿನಲ್ಲಿ ಹಾಗೂ ವಿಜಯಬ್ಯಾಂಕ್ ಎದುರಿನಲ್ಲಿ ಕೆಂಪು ದ್ವೀಪದ ಸಿಗ್ನಲ್ ಲೈಟ್ ಇರುವುದಿಲ್ಲ ಇಲ್ಲಿ ಕೂಡಲೇ ಒಂದು ಸಿಗ್ನಲ್ ಲೈಟ್ ಹಾಕಬೇಕಿದೆ ಹೀಗೆ ಹಾಕುವುದರಲ್ಲಿ ನಡೆಯಬಹುದಾದ ಸಂಭವನೀಯ ಅವಘಡ ಪ್ರಾಣಹಾನಿ ಸ್ವಲ್ಪ ಮಟ್ಟಿಗಾದರೂ ನಿಯಂತ್ರಿಸಬಹುದು ಅದೇ ರೀತಿ ಪೇಟೆಯಲ್ಲಿಯೂ ದಾರಿದೀಪದ ವ್ಯವಸ್ಥೆ ಆರಂಭಿಸಬೇಕು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ನಡೆಸುವ ಸಂದರ್ಭ ಗಾಯಾಳುಗಳನ್ನು ಸಾಗಿಸಲು ಅಂಬುಲೆನ್ಸ್, ಕ್ರೇನ್ ಹಾಗೂ ಅಗ್ನಿಶಾಮಕ ದಳದ ತುರ್ತು ಘಟಕ ಸ್ಥಾಪಿಸಬೇಕೆಂದು ವಿನಂತಿ

  • ಹರಿಕೃಷ್ಣ ಪುನರೂರು
    ಅಧ್ಯಕ್ಷರು ನಾಗರಿಕ ಸಮಿತಿ ಮುಲ್ಕಿ