20 ಸಾವಿರ ಜನರನ್ನು ಈ ವರ್ಷ ನೇಮಕ ಮಾಡಲಿರುವ ಇನ್ಫೊಸಿಸ್

ಬೆಂಗಳೂರು : ಇನ್ಫೋಸಿಸ್ ಈ ಬಾರಿ ವಾರ್ಷಿಕ ಕ್ಯಾಂಪಸ್ ನೇಮಕಾತಿ ಯೋಜನೆಯಲ್ಲಿ 20,000 ಇಂಜಿನಿಯರುಗಳನ್ನು ನೇಮಿಸಲಿದೆ.  ಐಟಿ ಕಂಪೆನಿಗಳು ದೇಶಾದ್ಯಂತ ಕೆಲಸ ಕಡಿತ ಮಾಡುತ್ತಿರುವ ನಡುವೆ ಈ ಬೆಳವಣಿಗೆಯಾಗಲಿದೆ. ಆದರೆ ಇನ್ಫೋಸಿಸ್ ತನ್ನ ಹೊಸ ನೇಮಕಾತಿಯನ್ನು ಡಿಜಿಟಲ್ ಮತ್ತು ವಿಶ್ಲೇಷಣಾತ್ಮಕ ವಿಭಾಗಗಳಿಗೆ ಸೀಮಿತಗೊಳಿಸಿದೆ. ಸೆಪ್ಟೆಂಬರಿನಿಂದ ವಾರ್ಷಿಕ ಇನ್ಫೋಸಿಸ್ ಕ್ಯಾಂಪಸ್ ನೇಮಕಾತಿ ಆರಂಭಗೊಳ್ಳಲಿದೆ.