ನೀಲೆಕಣಿಗೆ ದೊರೆಯಲಿದೆ ರೂ 667 ಕೋಟಿ ಗಂಟು

Nandan Nilekani

 ಬೆಂಗಳೂರು : ಐಟಿ ಕ್ಷೇತ್ರದ ದೈತ್ಯ ಕಂಪೆನಿ ಇನ್ಫೋಸಿಸ್ ತನ್ನ ಷೇರುಗಳ ಮರುಖರೀದಿ ಮಾಡಲಿರುವುದರಿಂದ ಕಂಪೆನಿಯ ಅಧ್ಯಕ್ಷ ಹಾಗೂ ಸಹ ಸ್ಥಾಪಕ ನಂದನ್ ನೀಲೆಕಣಿ ಮತ್ತವರ ಕುಟುಂಬ ಸದಸ್ಯರು ರೂ 667 ಕೋಟಿಯಷ್ಟು ದೊಡ್ಡ ಮೊತ್ತವನ್ನು ಪಡೆಯಲಿದ್ದಾರೆ. ಕಂಪೆನಿಯು ಷೇರುಗಳ ಮರುಖರೀದಿಗಾಗಿ ರೂ 13,000 ಕೋಟಿ ವ್ಯಯಿಸುತ್ತಿದ್ದು ಈ ಪ್ರಕ್ರಿಯೆ ಈ ವರ್ಷದ ನವೆಂಬರ್ 1ರತನಕ ನಡೆಯಲಿದೆ.