ಹೀಗಾದ್ರೆ ಬದುಕೋದು ಹ್ಯಾಗೇ

ಕೇಂದ್ರ ರಾಜ್ಯ ಸರಕಾರದ ಕತ್ತರಿಯಲ್ಲಿ ಜನಸಾಮಾನ್ಯ ಎಂಬ ಅಡಿಕೆ ಸಿಲುಕಿ ಅತ್ತ ತುಂಡಾಗದೇ ಇತ್ತ ಇರಲಾರದೇ ನರಳುತ್ತಿದೆ ಇದೇನಿದು ಅಂತ ಯೋಚಿಸುತ್ತಿದ್ದೀರಾ ಅದೇ ಬೆಲೆಯೇರಿಕೆ ಎಂಬ ಪಡೆಂಭೂತದ ದರ್ಶನ ಏನು ಸ್ವಾಮಿ ಅಕ್ಕಿಯಿಂದ ಹಿಡಿದು ತರಕಾರಿಯವರೆಗೆ ಎಲ್ಲದಕ್ಕೂ ವಿಪರೀತ ದರ  ಯಾವುದನ್ನೂ ಕೊಳ್ಳಲಾಗದ ಪರಿಸ್ಥಿತಿ ತರಕಾರಿಯ ಬೆಲೆ ಕೇಳಿದ್ರೆ ನೀವು ತಲೆ ತಿರುಗಿ ಬೀಳುವುದು ಖಂಡಿತ ಈರುಳ್ಳಿ ಟೊಮೆಟೋ ಚಿತ್ರದಲ್ಲಿ ನೋಡಿ ಸಮಾಧಾನಪಟ್ಟು ಕೊಳ್ಳಬೇಕಷ್ಟೇ ಇನ್ನಾದ್ರೂ ಎರಡು ಸರಕಾರ ಕಣ್ಣು ತೆರೆದುನೋಡಲಿ

  • ಚಿಂತನ್ ಪುತ್ತೂರು