ನರ್ಮ್ ಯೋಜನೆ ಅಸಮರ್ಪಕ ಜಾರಿಯಿಂದ ಸಂಚಾರಕ್ಕೆ ಸಂಚಕಾರ

ಕಳೆದೊಂದು ವರ್ಷದಿಂದ ನರ್ಮ್ ಯೋಜನೆಯ ಅತ್ಯುಧುನಿಕ ಮತ್ತು ಸುಖಕರ  ಪರಿಸರ ಸಹ್ಯ ಪ್ರಯಾಣಧ ಕನಸು ಹೊತ್ತ ಮಂಗಳೂರಿಗರಿಗೆ ಅದು ಕನಸಿನ ಮಾತೇ ಆಗಿದೆ  ಕೇವಲ 20-30 ಬಸುಗಳು ಮಾತ್ರ ಓಡಾಡುತ್ತಿದ್ದು ಬಾಕಿ ಇರುವ 15 ಬಸ್ಸುಗಳು ಸಂಚಾರ ಪ್ರಾರಂಭಿಸಿರುವುದಿಲ್ಲ  ಈತನ್ಮಧ್ಯೆ ಖಾಸಗಿ ಬಸ್ ಮಾಲಕರ ಲಾಬಿ ಕೋರ್ಟ್ ಕಟ್ಟೆ ಹತ್ತಿದೆ ಎಂಬ ಕಾರಣಕ್ಕಾಗಿ ಅದು ವಿಳಂಬವಾಗುತ್ತಿದೆ ಎಂದೂ ಹೇಳಲಾಗುತ್ತಿದೆ
ಈ ಮೊದಲಿನ ಜಿಲ್ಲಾಧಿಕಾರಿಯವರ ದೃಢ ಧೋರಣೆಯಿಂದ ನರ್ಮ್ ಬಸ್ ಕೆಲವಾದರೂ ಪ್ರಯಾಣ ಆರಂಭಿಸಿದೆ  ಅದಕ್ಕೆ ಅನಂತರ ಮತ್ತು ಈಗಿನ ಜಿಲ್ಲಾಡಳಿತ ಬಸ್ ಮಾಲಕರಿಗೆ ಅನುಕೂಲ ಕಲ್ಪಿಸಿ ಕಳೆದ ನವೆಂಬರ್ 10ರಂದು ಬಸ್ ದರ ಹೆಚ್ಚಿಸಲು ಅವಕಾಶ ಮಾಡಿಕೊಟ್ಟರು ಅನಂತರ ತಡೆಯಾಜ್ಞೆ ತೆರವಿಗೆ ಯತ್ನಿಸದೆ ಖಾಸಗಿ ಬಸ್ ಮಾಲಕರ ದಬ್ಬಾಳಿಕೆ  ದೌರ್ಜನ್ಯ  ಶೋಷಣೆಗೆ ಅವಕಾಶ ಮುಂದುವರಿಸಿದೆ
ಕೆಎಸ್ಸಾರ್ಟಿಸಿ ಅಧಿಕಾರಿಗಳೂ ಮೌನವಹಿಸಿದ್ದಾರೆ. ಖಾಸಗಿಯವರು ತಿಂಗಳ ಬಸ್ ಪಾಸ್ ವ್ಯವಸ್ಥೆ ಜಾರಿಗೊಳಿಸಿ ವಿಪರೀತ ದರ ನಿಗದಿ ಮಾಡಿದ್ದಾರೆ  ಪ್ರಾರಂಭದ ಹಂತ ರೂಪಾಯಿ 600 ರೂ ದುಬಾರಿಯಾಗಿದ್ದು ಇದರಲ್ಲಿ ಎರಡು ಹಂತ ಮಾಡಬೇಕಾಗಿದೆ  ರೂ 300 ನಗರದ ಒಳಗಿನ ಎಂಟು ಕಿ ಮೀ ವ್ಯಾಪ್ತಿ ಮತ್ತು ಅನಂತರದ 600 ರೂಪಾಯಿ ಉಳಿದ ದೂರಕ್ಕೆ ಬಸ್ ಪಾಸ್ ದರವನ್ನು ನಿಗದಿ ಮಾಡಬೇಕು ಮಾತ್ರವಲ್ಲದೆ  ನರ್ಮ್ ಹಾಗೂ ಇತರ ಕೆಎಸ್ಸಾರ್ಟಿಸಿ ಬಸ್ಸಿಗೂ ಇದರಲ್ಲಿ ಅವಕಾಶ ಕಲ್ಪಿಸಬೇಕು. ಆಗ ಮಾತ್ರ ಅದು ಯಶಸ್ವಿ ಯೋಜನೆಯಾಗಿ ಖಾಸಗಿ ಬಸ್ಸುಗಳ ಶೋಷಣೆಗೆ ಕಡಿವಾಣ ಬೀಳುತ್ತದೆ  ಈ ಬಗ್ಗೆ ಪ್ರಬಲ ಜನಾಂದೋಲನವನ್ನು ಜನಪರ ಸಂಘಟನೆಗಳು ಕೈಗೆತ್ತಿಕೊಳ್ಳಬೇಕು ಇದರ ಬದಲಾಗಿ ದನದ ಹಿಂದೆ ಬೀಳುವವರು  ಹುಡುಗಿಯರ ಹಿಂದೆ ಬೀಳುವವರು ಮತ್ತು ಶುಕ್ರವಾರದ ಪ್ರತಿಭಟನೆಗೆ ಮಾತ್ರ ಕಾಯುವವರು ಸೇರಿದಂತೆ ಎಲ್ಲರೂ ಹೋರಾಟ ರೂಪಿಸಬೇಕು

  • ಪ್ರಕಾಶ್ ಬಿ ನೇರ್ವೆ
    ಶಕ್ತಿನಗರ ಮಂಗಳೂರು