`ಇಂದ್ರಜಿತ್ ತನಿಖೆಗೆ ಸಹಕರಿಸುತ್ತಿಲ್ಲ’

ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಬುಧವಾರ ಗೌರಿ ಅವರ ಸಹೋದರ ಇಂದ್ರಜಿತ್ ಲಂಕೇಶ್ ಅವರನ್ನು ವಿಚಾರಣೆಗೆ ಗುರಿ ಪಡಿಸಿದರು. ಆಸ್ತಿ ವಿವಾದವೊಂದರ ಸಂಬಂಧ ಇಂದ್ರಜಿತ್ ತನಗೆ ಬಂದೂಕು ತೋರಿಸಿ ಬೆದರಿಸಿದ್ದರೆಂದು 2005ರಲ್ಲಿ ಗೌರಿ  ಅವರ ವಿರುದ್ಧ ದಾಖಲಿಸಿದ್ದ ದೂರೊಂದರ ಆಧಾರದಲ್ಲಿ ವಿಚಾರಣೆ ನಡೆದಿದೆ. “ಇಂದ್ರಜಿತ್ ಅವರ ಬಳಿಯಿರುವ ಬಂದೂಕು ಯಾವುದೆಂದು ತಿಳಿಯಲು ಪ್ರಯತ್ನಿಸುತ್ತಿದ್ದೇವೆ, ಆದರೆ ಅವರು ತನಿಖೆಗೆ ಸಹಕರಿಸುತ್ತಿಲ್ಲ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.