ಸರ್ಕಾರದ ಇಂದಿರಾ ಕ್ಯಾಂಟೀನ್ ಕಾಲೇಜಿಗೂ ವಿಸ್ತರಣೆಯಾಗಲಿ

ಪ್ರಸ್ತುತ ಇಂದಿರಾ ಕ್ಯಾಂಟೀನ್ ಕಡಿಮೆ ಬೆಲೆಯಲ್ಲಿ ಹೋಟೆಲ್ ಸೇವೆಗೆ ಮುಂದಾಗಿರುವುದು ಅತ್ಯಂತ ಸ್ವಾಗತಾರ್ಹ. ಹಿಂದುಳಿದ ಹಾಗೂ ಕೆಳ ಮಧ್ಯಮ ವರ್ಗದ ಜನರ ಹಿತ ದೃಷ್ಟಿಯಿಂದ ಇದು ಅನುಕೂಲಕರವೆನಿಸಿದೆ. ಹಾಗಂತ ಸರಕಾರದ ಬೊಕ್ಕಸ ಬರಿದಾಗದೇ ಇರದು ರಾಜ್ಯದ ಕಾಲೇಜುಗಳಿಗೂ ಇಂತಹ ಸೇವೆ ವಿಸ್ತರಿಸಿದರೆ ನಿಜಕ್ಕೂ ಅರ್ಥಪೂರ್ಣ ಯೋಜನೆಯಾಗುತ್ತದೆ ಶಾಲಾ ಕಾಲೇಜುಗಳಲ್ಲಿ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಪ್ರವೇಶ ಪಡೆದಿರುತ್ತಾರೆ ಅವರಿಗೆ ಬಿಸಿಯೂಟ ಬೇರೊಂದು ರೂಪದಲ್ಲಿ ಸಿಕ್ಕಿದಂತಾಗುತ್ತದೆ ಆದಷ್ಟೂ ಕಾಲೇಜುಗಳಲ್ಲಿ ಕ್ಯಾಂಟೀನ್ ವ್ಯವಸ್ಥೆಯೇ ಇರುವುದಿಲ್ಲ ಸರಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡರೆ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಹೆಸರಿನ ಯೋಜನೆ ಇನ್ನಷ್ಟು ಅರ್ಥಪೂರ್ಣವಾದೀತು

  • ಅನುಪ್ರಿಯಾ ಶೆಟ್ಟಿ  ದಾಮಸಕಟ್ಟೆ