ಭಾರತದ ಹಳಿಗಳಿಗೆ ಹೊರೆ ಹೆಚ್ಚು, ರೈಲು ಹಳಿ ತಪ್ಪುವುದೂ ಅಧಿಕ

ರೈಲು ಅಪಘಾತಗಳ ಪೈಕಿ ಎಂಟು ಅಪಘಾತಗಳು ಈ ಪ್ರಾಂತ್ಯದಲ್ಲೇ ಸಂಭವಿಸಿವೆ. ದೆಹಲಿ-ತಂಡ್ಲಾ-ಕಾನ್ಪುರ ವ್ಯಾಪ್ತಿಯ ರೈಲು ಮಾರ್ಗ ಅತ್ಯಂತ ಅಪಾಯಕಾರಿ ಎಂದೇ ಪರಿಗಣಿಸಲಾಗಿದೆ.

ಗಂಗಾ ತೀರದ ರೈಲು ಹಳಿಗಳಲ್ಲಿ ರೈಲು ಪ್ರಯಾಣ ಎಷ್ಟು ದಟ್ಟವಾಗಿದೆ ಎಂದರೆ ಎಲ್ಲ ರೈಲುಗಳೂ ಸಹ ನಿಗದಿತ ಸಮಯಕ್ಕೆ ಚಾಲ್ತಿಯಲ್ಲಿದ್ದರೆ ರೈಲು ಕಂಬಿಗಳು ಒತ್ತಡ ತಡೆದುಕೊಳ್ಳುವುದು ಅಸಾಧ್ಯವಾಗುತ್ತದೆ.

ಪ್ರತಿವರ್ಷ ರೈಲ್ವೆ ಬಜೆಟ್ಟಿನಲ್ಲಿ ಹೊಸ ರೈಲುಗಳನ್ನು ಘೋಷಿಸಲಾಗುತ್ತದೆ. ಆದರೆ ರೈಲು ಮಾರ್ಗಗಳ ವಿಸ್ತರಣೆಯನ್ನು ಕುರಿತು ಪ್ರಸ್ತಾಪವೂ ಇರುವುದಿಲ್ಲ. ರೈಲು ದಟ್ಟಣೆ ಹೆಚ್ಚಾಗಿರುವುದರಿಂದ ಎರಡು ರೈಲುಗಳು ಪರಸ್ಪರ ಮುಖಾಮುಖಿಯಾಗಿ ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸುರಕ್ಷತಾ ಕಾರ್ಯಗಳಿಗಾಗಿ ಸರ್ಕಾರದಿಂದ ನೀಡಲಾಗುವ ಹಣಕಾಸು ಸಹಾಯ ಅತಿಕಡಿಮೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ಹಾಗಾಗಿಯೇ ರೈಲು ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಸಾವು ನೋವು ಸಂಭವಿಸುತ್ತಲೇ ಇರುತ್ತವೆ.