ಮೂಡಿಸ್ ರೇಟಿಂಗಿಗಾಗಿ ಭಾರತದ ಲಾಬಿ ವಿಫಲ

ಮುಂಬೈ : ಸ್ಟಾಂಡರ್ಡ್ ಅಂಡ್ ಪೂರ್ ಮತ್ತು ಫಿಚ್ ಸಮೂಹದ ಶ್ರೇಣೀಕರಣದ ಪ್ರಕಾರ ಭಾರತ ಬಿಬಿಬಿ ಸ್ಥಾನ ಪಡೆದಿದೆ. ಮೂಡಿಸ್ ಸಮೂಹದ ಪ್ರಕಾರ ಬಿಎಎ3 ಶ್ರೇಣಿಯನ್ನು ಗಳಿಸಿದೆ. ಕ್ರೆಡಿಟ್ ರೇಟಿಂಗ್ಸ್ ಶ್ರೇಣಿಯಲ್ಲಿ ಇದು ಅತ್ಯಂತ ಕನಿಷ್ಠ ಮಟ್ಟವಾಗಿದೆ. ಭಾರತದ ಶ್ರೇಣಿಯನ್ನು ಹೆಚ್ಚಿಸುವಂತೆ ಮೂಡಿ ಸಂಸ್ಥೆಯ ಬಳಿ ಭಾರತದ ವಿತ್ತ ಸಚಿವರು ತೀವ್ರ ಲಾಬಿ ಮಾಡಿದ್ದರೂ ಸಹ ವಿಫಲರಾಗಿದ್ದಾರೆ ಎಂದು ರೈಟರ್ಸ್ ವಾರ್ತಾ ಸಂಸ್ಥೆಯ ವರದಿ ಹೇಳಿದೆ.

ದೇಶದ ಸಾಲದ ಹೊರೆ ಕಡಿಮೆಯಾಗುತ್ತಿರುವುದನ್ನು ರೇಟಿಂಗ್ ಏಜೆನ್ಸಿ ಸಂಸ್ಥೆ ಪರಿಗಣಿಸಿಲ್ಲ ಎಂದು ಭಾರತದ ವಿತ್ತ ಸಚಿವರು ಆರೋಪಿಸಿದ್ದು ದೇಶದ ಆರ್ಥಿಕ ಸಾಮಥ್ರ್ಯವನ್ನು ಅಳೆಯಲು ಅಭಿವೃದ್ಧಿಯ ಹಂತಗಳನ್ನು ಪರಿಗಣಿಸುವಂತೆ ಆಗ್ರಹಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ವಿದೇಶಿ ವಿನಿಮಯದ ಕಾಯ್ದಿಟ್ಟ ಪ್ರಮಾಣದಲ್ಲಿ ಅಭಿವೃದ್ಧಿಯಾಗಿದ್ದು ಇದನ್ನು ಪರಿಗಣಿಸುವಂತೆ ವಿತ್ತ ಸಚಿವಾಲಯ ಮೂಡಿ ಸಂಸ್ಥೆಯ ವಿಶ್ಲೇಷಕ ಮ್ಯಾರಿ ಡಿರೋನ್ ಅವರನ್ನು ಆಗ್ರಹಿಸಿತ್ತು.

ಜಪಾನ್ ಮತ್ತು ಪೋರ್ಚುಗಲ್ ಕ್ರಮೇಣ ಎ1 ಮತ್ತು ಬಿಎ1 ಶ್ರೇಣಿಯನ್ನು ಪಡೆದಿದ್ದು ಈ ದೇಶಗಳು ಸಾಲದ ಹೊರೆ ಅಂತರಿಕ ಸಂಪತ್ತಿನ ಎರಡರಷ್ಟಿದೆ ಎಂದು ವಿತ್ತ ಸಚಿವರು ಆರೋಪಿಸಿದ್ದಾರೆ. ಆದರೆ ಈ ಪ್ರತಿಪಾದನೆಗಳು ಮೂಡಿ ಸಂಸ್ಥೆಯ ವಿಶ್ಲೇಷಕರನ್ನು ಅಷ್ಟಾಗಿ ಪ್ರಭಾವಕ್ಕೊಳಪಡಿಸಿಲ್ಲ. ಕಳೆದ ಹಲವು ತಿಂಗಳುಗಳಿಂದ ಸರ್ಕಾರ ತನ್ನ ಪ್ರಯತ್ನದಲ್ಲಿ ತೊಡಗಿದ್ದರೂ ಮೂಡಿ ಸಂಸ್ಥೆ ಬಿಎಎ3 ಶ್ರೇಣಿಯನ್ನು ನೀಡಿದ್ದು, ಈ ಕುರಿತು ಯಾವುದೇ ಹೇಳಿಕೆ ನೀಡಲೂ ಕೇಂದ್ರ ಸರಕಾರ ನಿರಾಕರಿಸಿದೆ.