ಗೆಳೆಯನ ದರೋಡೆಗೈದ ಭಾರತೀಯಗೆ ಜೈಲುಶಿಕ್ಷೆ ವಿಧಿಸಿದ ಲಂಡನ್ ಕೋರ್ಟ್

ಸಾಂದರ್ಭಿಕ ಚಿತ್ರ

ಲಂಡನ್ : ಗೆಳೆಯನಿಗೆ ಚೂರಿಯಿಂದ ಬೆದರಿಕೆಯೊಡ್ಡಿ ದರೋಡೆಗೈದ ಭಾರತೀಯ ಮೂಲದ ವೃತ್ತಿಪರ ಕ್ರಿಮಿನಲ್ಲೊಬ್ಬನಿಗೆ ಇಂಗ್ಲಂಡ್ ಕೋರ್ಟೊಂದು ಆರು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆರೋಪಿ ಮಾದಕ ವ್ಯಸನಿಯಾಗಿದ್ದಾನೆ. ಸುರಿಂದರ್ ಸಿಂಗ್(42) ಎಂಬಾತನಿಗೆ ಲಂಡನಿನ ವುಡ್ ಗ್ರೀನ್ ಕೋರ್ಟ್ ಮೊನ್ನೆ ಜೈಲು ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.