ಅಮೆರಿಕದಲ್ಲಿ ಭಾರತೀಯ ವ್ಯಕ್ತಿ ದರೋಡೆ, ಬಂದೂಕಿನಿಂದ ಬೆದರಿಕೆ

ಹೈದರಾಬಾದ್ : ಅಮೆರಿಕದಲ್ಲಿ ಶೆಲ್ ಪೆಟ್ರೋಲ್ ಪಂಪಿಗೆ ನುಗ್ಗಿದ ಮುಸುಕುಧಾರಿ ದುಷ್ಕರ್ಮಿಯೊಬ್ಬ ಭಾರತೀಯ ಸಿಬ್ಬಂದಿಯೊಬ್ಬಗೆ ಬಂದೂಕಿನ ಮೊನೆಯಿಂದ ಬೆದರಿಕೆಯೊಡ್ಡಿ ದರೋಡೆಗೈದು ಪರಾರಿಯಾದ ಘಟನೆ ವರದಿಯಾಗಿದೆ. ಮಿಸಿಸ್ಸಿಪ್ಪಿಯ ಕ್ಲಿಂಟನಿನಲ್ಲಿ ಈ ಘಟನೆ ನಡೆದಿದ್ದು, ದುಷ್ಕರ್ಮಿಯು ಭಾರತೀಯ ವ್ಯಕ್ತಿ ವರುಣಗೆ “ನನ್ನ ದೇಶ ಬಿಟ್ಟು ಹೋಗು” ಎಂದು ಬೆದರಿಕೆಯೊಡ್ಡಿದ್ದಾನೆ. ಘಟನೆ ವೇಳೆ ವರುಣ್, ಕ್ಯಾಶ್ ಕೌಂಟರಿನಲ್ಲಿದ್ದು, ತೆಲಂಗಾಣದಲ್ಲಿರುವ ತನ್ನ ತಾಯಿಯೊಂದಿಗೆ ವೀಡಿಯೋ ಕಾಲ್ ಮಾಡುತ್ತಿದ್ದ.