ರಕ್ಷಣಾ ತಂತ್ರಜ್ಞಾನ ಚರ್ಚೆಗಾಗಿ ಭಾರತ ತಂಡ ಅಮೆರಿಕಾದಲ್ಲಿ

ಸಾಂದರ್ಭಿಕ ಚಿತ್ರ

 ನವದೆಹಲಿ : ಭಾರತದ ರಕ್ಷಣಾ ಸಚಿವಾಲಯದ ನಿಯೋಗವೊಂದು ಅಮೆರಿಕಾಗೆ ತೆರಳಿದ್ದು ಡಿಫೆನ್ಸ್ ಟೆಕ್ನಾಲಜಿ ಎಂಡ್ ಟ್ರೇಡ್ ಇನೀಶಿಯೇಟಿವ್ ಅಂಗವಾಗಿ ಎರಡೂ ದೇಶಗಳ ನಡುವಣ ಸಹಕಾರದ ವಿಚಾರದಲ್ಲಿ ಮಾತುಕತೆಗೆ ಮುಂದಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಒಟ್ಟು ಒಂಬತ್ತು ತಂಡಗಳನ್ನು ರಚಿಸಲಾಗಿದ್ದು ಎರಡೂ ದೇಶಗಳ ಬಳಕೆಗಾಗಿ ಪರಸ್ಪರ ಸಹಯೋಗದಿಂದ ಮಿಲಿಟರಿ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಉತ್ಪಾದನೆ ಇದರ ಉದ್ದೇಶವಾಗಿದೆ. ಇತ್ತೀಚೆಗೆ ಈ ನಿಟ್ಟಿನಲ್ಲಿ ರಚಿತವಾದ ಗುಂಪು ಹೊಸ ನೌಕಾದಳ ವ್ಯವಸ್ಥೆಗಳಿಗೆ ಸಂಬಂಧಿಸಿದ್ದಾಗಿದೆ.