ಭಾರತೀಯ ಮೂಲದ ಉದ್ಯಮಿ ಗಂಡೇಟಿಗೆ ಬಲಿ

ಸಾಂದರ್ಭಿಕ ಚಿತ್ರ

ಕರೋಲಿನಾ (ಅಮೆರಿಕ) : ಅಮೆರಿಕದ ಉತ್ತರ ಕರೊಲಿನಾದಲ್ಲಿ ನಡೆದ ಗುಂಡು ಹಾರಾಟ ಪ್ರಕರಣವೊಂದರಲ್ಲಿ ಭಾರತೀಯ ಮೂಲದ ಮೋಟೆಲ್ ಮಾಲಕ ಮೃತಪಟ್ಟಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ಮೃತ ವ್ಯಕ್ತಿ ಆಕಾಶ್ ತಲಾಟಿ (40) ನೈಟ್ಸ್ ಇನ್ ಆ್ಯಂಡ್ ಡೈಮಂಡ್ ಜಂಟಲಮೆನ್ ಕ್ಲಬ್ ಮಾಲಕರಾಗಿದ್ದರು. ಬೆಂಗಾವಲಿನ ವ್ಯಕ್ತಿಯೊಬ್ಬ ಸೆಕ್ಯೂರಿಟಿ ಗಾರ್ಡುಗಳೊಂದಿಗೆ ಗುಂಡಿನ ಚಕಮಕಿ ನಡೆಸಿದಾಗ ತಲಾಟಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.