ಚೀನಾ ಗಡಿ ಸಮೀಪ ಹೆಚ್ಚಿನ ಸೈನಿಕರ ನೇಮಿಸಿದ ಭಾರತ

 ನವದೆಹಲಿ : ಭಾರತ-ಚೀನಾ ಗಡಿಯ ಪೂರ್ವ ವಲಯದಲ್ಲಿ ಭಾರತೀಯ ಸೇನೆ ತನ್ನ ಪಡೆಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಕಳೆದ  ಎಂಟು ವಾರಗಳ ಅವಧಿಯಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಸಿಕ್ಕಿಂ ಸೆಕ್ಟರಿನ ಡೋಕ್ಲಂ ಎಂಬಲ್ಲಿ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಸಿಕ್ಕಿಂನ ಸಿಲಿಗುರಿ, ರಂಗಪಹರ್ ಹಾಗೂ ತೇಜಪುರ, ಪಶ್ಚಿಮ ಬಂಗಾಳ ಮತ್ತು ಅರುಣಾಚಲ ಪ್ರದೇಶದಲ್ಲಿ ಕೂಡಾ ಸೇನಾ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.