ಪಶುವೈದ್ಯಕೀಯ ಇಲಾಖೆ ಸಿಬ್ಬಂದಿ ಅನಿರ್ಧಿಷ್ಟ ಮುಷ್ಕರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಪಶುವೈದ್ಯರು, ಜಾನುವಾರು ತಪಾಸಕರು ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಇತರ ಸಿಬ್ಬಂದಿಗಳು ಮತ್ತು ಕರ್ನಾಟಕ ಪಶುವೈದ್ಯಕೀಯ ಸಂಘದ ಸದಸ್ಯರು ಕೇಡರ್ ಮತ್ತು ನೇಮಕಾತಿ ನಿಯಮಗಳನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗುರುವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದಾರೆ. ಗುರುವಾರ ಜಿಲ್ಲೆಯ ಎಲ್ಲಾ ಪಶುಆಸ್ಪತ್ರೆಗಳು, ಕ್ಲಿನಿಕ್ಕುಗಳು ಮುಚ್ಚಲ್ಪಟ್ಟಿದ್ದವು.

“ಇಲಾಖೆಯು 4 ವರ್ಷಗಳ ಹಿಂದೆಯೇ ಸಿ ಮತ್ತು ಆರ್ ನಿಯಮ ಪರಿಷ್ಕರಿಸಿದ್ದರೂ ಅಧಿಕಾರಿಗಳು ಇದುವರೆಗೆ ಅಂತಿಮ ಸೂಚನೆ ಹೊರಡಿಸಿಲ್ಲ. ಈ ಮುಷ್ಕರ ಮೇ 7ರಂದು ಆರಂಭವಾಗಲಿತ್ತು. ಆದರೆ ಪಶುಸಂಗೋಪನಾ ಸಚಿವರು ಈ ನಿಯಮವನ್ನು 3 ದಿನಗಳೊಳಗೆ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರಿಂದ ಮೂರ್ನಾಲ್ಕು ದಿನ ಕಾದು ನೋಡಿದೆವು. ಆದರೆ ಇದುವರೆಗೆ ನಿಯಮ ಜಾರಿಗೊಳ್ಳುವ ಯಾವುದೇ ಲಕ್ಷಣಗಳು ಕಾಣಲಿಲ್ಲ. ಹಾಗಾಗಿ ಮುಷ್ಕರಕ್ಕೆ ಕಾಲಿಟ್ಟಿದ್ದೇವೆ” ಎಂದು ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ ಜಿ ಶಿವಾನಂದ ಹೇಳಿದ್ದಾರೆ.

“ಕೇಡರ್ ಮತ್ತು ನೇಮಕಾತಿ ನಿಯಮಗಳನ್ನು ಜಾರಿಗೊಳಿಸದೇ ಇರುವುದರಿಂದ ಮಂಗಳೂರಿನಲ್ಲಿ ಸುಮಾರು 24 ವರ್ಷಗಳಿಂದ ಅವಿರತ ಸೇವೆ ಸಲ್ಲಿಸುತ್ತಿರುವ ಅನೇಕ ವೈದ್ಯರು ಒಂದು ಚಿಕ್ಕ ಭಡ್ತಿಯನ್ನು ಕಾಣದೆ ದುಡಿಯುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಅನೇಕ ಆಸ್ಪತ್ರೆ ಮತ್ತು ಕ್ಲಿನಿಕ್ಕುಗಳಲ್ಲಿ ಹುದ್ದೆಗಳು ಖಾಲಿ ಬಿದ್ದಿವೆ. ಇತರ ಆಸ್ಪತ್ರೆ/ಕ್ಲಿನಿಕ್ಕುಗಳ ಹೆಚ್ಚುವರಿ ಕೆಲಸಗಳನ್ನು ಇರುವ ವೈದ್ಯರ ಮೇಲೆ ಹೇರುತ್ತಿರುವುದರಿಂದ ವೈದ್ಯರು ಮತ್ತು ಸಿಬ್ಬಂದಿಗಳ ಕೆಲಸದ ಒತ್ತಡ ಹೆಚ್ಚುತ್ತಿದೆ. ಪರಿಣಾಮವಾಗಿ ಜಿಲ್ಲೆಯಲ್ಲಿ ಸುಮಾರು 15,000 ಕ್ಕೂ ಅಧಿಕ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಭಡ್ತಿಯಿಂದ ವಂಚಿತರಾಗಿದ್ದಾರೆ” ಎಂದು ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ ಕೆ ಆರ್ ಅಶೋಕ್ ಹೇಳಿದ್ದಾರೆ.

“ಭರವಸೆಗಳಲ್ಲಿ ಈಗಾಗಲೇ 150 ಭರವಸೆಗಳನ್ನು ಈಡೇರಿಸಿದೆ. ಅಖಿಲ ಭಾರತ ಕಾಂಗ್ರೆಸ್ ಕಮಿಟಿಯು ತಂಡಗಳನ್ನು ರಚಿಸಿದ್ದು, ರಾಜ್ಯದ ಪಕ್ಷದ ಕೆಲಸಗಾರರಿಂದ ಮಾಹಿತಿ ಸಂಗ್ರಹಕ್ಕೆ ನಿರ್ಧರಿಸಿದೆ. ವಿಷ್ಣುನಂದರು ಮೈಸೂರು ವಿಭಾಗದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇಂತಹ ಸಭೆಗಳನ್ನು ಅಭಿಪ್ರಾಯ ಸಂಗ್ರಹಕ್ಕಾಗಿ ಒಂದಾದ ಮೇಲೊಂದರಂತೆ ನಡೆಸಲಾಗುವುದು” ಎಂದು ಅವರು ತಿಳಿಸಿದ್ದಾರೆ.