ಆಸ್ತಿ ಹೆಚ್ಚಳ ಆಶ್ಚರ್ಯವಲ್ಲ

ಕೇಂದ್ರ ಸಚಿವರ ಆಸ್ತಿಯಲ್ಲಿ ಹೆಚ್ಚುವರಿ ವರದಿ ನೋಡಿ ಅಚ್ಚರಿಯೇನಾಗಲಿಲ್ಲ  ಏಕೆಂದರೆ ಕಡು ಬಡವರಾದ ಅವರ ವೇತನ ಮತ್ತಿತರ ಭತ್ಯೆಗಳನ್ನು ಕಾಲಕಾಲಕ್ಕೆ ಹೆಚ್ಚಿಸಿಕೊಳ್ಳುತ್ತಾ ಬಂದಿದೆ  ಸಂಸತ್ತು ರಾಜಕಾರಣಿಗಳ ಆಸ್ತಿಯಲ್ಲಿ ನಾವು ಏರುಮುಖದ ಗ್ರಾಫ್ ನೋಡುತ್ತೇವೆ ನಮ್ಮ ವಿಧಾನಸಭಾ ಸದಸ್ಯರ ಆಸ್ತಿನೂ ಅಷ್ಟೇ ಪುಡಿ ರಾಜಕಾರಣಿಗಳೇ ಕನಿಷ್ಠವೆಂದರೂ ನೂರಾರು ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿರುವಾಗ ಕೇಂದ್ರ ಸಚಿವರದು ಯಾವ ಮಹಾ ಆಸ್ತಿಯೆಂದು ಜನಸಾಮಾನ್ಯರಿಗೆ ಅನಿಸದೇ ಇರದು ಇವರೆಲ್ಲ ಸಮಾಜ ಸೇವೆ ಮಾಡಲು ಬಂದವರಂತೆ ಕಾಲಾಯ ತಸ್ಮೈ ನಮಃ

  • ಎಂ ಛಾಯಾಪತಿ  ಕುಂದಾಪುರ