ಸಂಘ ಪರಿವಾರ ಸಂಘಟನೆಗಳಿಗೆ ಹಿನ್ನಡೆಯಾದ 5 ದುರ್ಘಟನೆಗಳು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ ಕಳಸ ಬಂಡೂರಿ (ಮಹದಾಯಿ) ನೀರಾವರಿ ಯೋಜನೆಯಲ್ಲಿ ರಾಜಕೀಯ ಮಾಡಲು ಹೋಗಿ ಬಿಜೆಪಿಗೆ ರಾಜ್ಯದಲ್ಲೇ ಹೀನಾಯವಾಗಿ ಮುಖಭಂಗವಾದ ಅನಂತರ ಕರಾವಳಿ ಮತ್ತು ರಾಜ್ಯದ ಇತರೆಡೆ ನಡೆದ ಸರಣಿ ಘಟನೆಗಳು ಹಿಂದೂತ್ವ ಸಂಘಟನೆ ಮತ್ತು ಬಿಜೆಪಿಗೆ ಭಾರೀ ಹಿನ್ನಡೆ ಉಂಟುಮಾಡಿದೆ.

ವಿಜಯಪುರದಲ್ಲಿ ದಲಿತ ಬಾಲಕಿಯನ್ನು ಲೈಂಗಿಕವಾಗಿ ಶೋಷಣೆ ಮಾಡಿ ಕೊಲೆ ಮಾಡಿರುವುದು ಸೇರಿದಂತೆ ಹಲವಾರು ಮಾನವ ವಿರೋಧಿ ದುರ್ಘಟನೆಗಳು ಮಹದಾಯಿ ಅವಾಂತರವನ್ನು ಸಾರ್ವಜನಿಕವಾಗಿ ಮುಚ್ಚಿ ಹೋಗುವಂತೆ ಮಾಡಿರುವುದು ಸುಳ್ಳಲ್ಲ.

ಮಂಗಳೂರಿನ ಸುರತ್ಕಲ್ ಕಾಟಿಪಳ್ಳ ಪ್ರದೇಶದಲ್ಲಿ ಸಾರ್ವಜನಿಕ ಗೌರವ ಮತ್ತು ಮುಸ್ಲಿಮರ ಪ್ರೀತಿಗೆ ಪಾತ್ರನಾಗಿದ್ದ ಸನ್ನಡತೆಯ ಬಡ ಕುಟುಂಬದ ಯುವಕ ದೀಪಕ್ ರಾವ್ ಕೊಲೆ ಪ್ರಕರಣವನ್ನು ಹಿಂದೂತ್ವವಾದಿ ಶಕ್ತಿಗಳು ರಾಜಕೀಯವಾಗಿ ಬಳಸಲು ಶತ ಪ್ರಯತ್ನ ನಡೆಸಿದ್ದರು. ಆದರೆ, ದಿನಗಳೆದಂತೆ ದೀಪಕ್ ರಾವ್ ಕೊಲೆ ಪ್ರಕರಣವು ಬಿಜೆಪಿಯ ಮುಖಂಡರಿಗೆ ತಿರುಗುಬಾಣವಾಗಿ ಪರಿಣಮಿಸಿತು.

ದೀಪಕ್ ರಾವ್ ಎಂಬ ಯುವಕನನ್ನು ಕೊಂದವರು ಮುಸ್ಲಿಂ ಸಮಾಜಕ್ಕೆ ಸೇರಿದವರಾಗಿದ್ದರು, ಕೊಲೆ ಮಾಡಲು ಇರುವ ಕಾರಣ ಇಂದಿಗೂ ಬೆಳಕಿಗೆ ಬಂದಿಲ್ಲ. ಎರಡನೇಯದಾಗಿ ಕೊಲೆ ಆರೋಪಿಗಳು ಹಿಂದೂತ್ವವಾದಿ ಸಂಘಟನೆಗಳಿಗೆ ಸೇರಿದ ಜನರೊಂದಿಗೆ ಸಂಪರ್ಕ ಹೊಂದಿದವರು ಮತ್ತು ಸ್ಥಳೀಯ ಬಿಜೆಪಿ ಮುಖಂಡನೊಬ್ಬ ಈ ಕೊಲೆಯ ಹಿಂದಿದ್ದಾನೆ ಎಂಬ ಮಾಜಿ ಮುಖ್ಯಮಂತ್ರಿಯೊಬ್ಬರ ಆರೋಪ ಬಿಜೆಪಿಯನ್ನು ಸಂಶಯದಿಂದ ನೋಡುವಂತೆ ಮಾಡಿದೆ.

ಮಾತ್ರವಲ್ಲದೆ, ಈ ಹಿಂದೆ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿದ ಕೊಲೆಗೀಡಾದ ಯುವಕರು ಮತ್ತು ಅವರ ಕುಟುಂಬದ ಪರಿಸ್ಥಿತಿಗೂ ದೀಪಕ್ ರಾವ್ ಮತ್ತವನ ಕುಟುಂಬದ ಪರಿಸ್ಥಿತಿಗೂ ಸಾಮ್ಯತೆ ತಂಡುಬಂದಿದೆ.

ದೀಪಕ್ ಕೊಲೆಯ ಬೆನ್ನಲ್ಲೇ ಬಶೀರ್ ಎಂಬ ಹಿಂದೂ ಸಮಾಜದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ದುಡಿದು ತಿನ್ನುವ ವ್ಯಕ್ತಿಯ ಕೊಲೆ ಕೂಡ ಹಿಂದೂತ್ವವಾದಿ ಸಂಘಟನೆಗಳಿಗೆ ಹಿನ್ನಡೆಯಾಗಿದೆ. ಮುಯ್ಯಿಗೆ ಮುಯ್ಯಿ ಎಂಬಂತೆ ಬಶೀರ್ ಕೊಲೆ ಮಾಡಲಾಗಿತ್ತು. ಆದರೆ, ಬಶೀರ್ ಹಿಂದೂಗಳ ರಕ್ಷಕನಾಗಿದ್ದ ಮಾತ್ರವಲ್ಲದೆ ಧನ ಸಹಾಯ ನೀಡುತ್ತಿದ್ದ ಮನುಷ್ಯನಾಗಿದ್ದ. ಈ ಬಗ್ಗೆ ಸಾರ್ವಜನಿಕರಿಗೆ ಸ್ವಘೋಷಿತ ಹಿಂದೂತ್ವ ವಾದಿಗಳ ವಿರುದ್ಧ ಹೇಸಿಗೆ ಮೂಡಿಸಿದೆ.

ಇವುಗಳ ಮಧ್ಯೆ, ಬಜರಂಗದಳದಲ್ಲಿ ಮೂಲೆಗುಂಪಾದ ಪದಾಧಿಕಾರಿಯೊಬ್ಬ ಸಾರ್ವಜನಿಕ ಹಾದಿ ತಪ್ಪಿಸುವ ಮತ್ತು ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ತಲವಾರು ಹಲ್ಲೆಯ ಕಟ್ಟುಕತೆ ಕಟ್ಟಿ ಸಿಕ್ಕಿಬಿದ್ದಿರುವುದು ಮತ್ತೊಂದು ಆಘಾತಕಾರಿ ಬೆಳವಣಿಗೆಯಾಗಿದೆ. ಈ ಘಟನೆಯಲ್ಲಿ ಖಾ¸ಗಿ ಟೀವಿ ವಾಹಿನಿಯೊಂದು ಕೂಡ ನಗೆಪಾಟಲೀಗೆ ಈಡಾಗಿದೆ. ಕರಾವಳಿಯ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಸಾರ್ವಜನಿಕರಿಂದ ಸೋಶಿಯಲ್ ಮಿಡೀಯಾಗಳಲ್ಲಿ ಟೀಕೆಗೆ ಒಳಗಾದ ಟೀವಿ ಚಾನಲ್ ಘಟನೆಯ ಸತ್ಯಾಸತ್ಯತೆ ವಿಮರ್ಶೆ ಮಾಡದೆ ಸುಳ್ಳು ವರದಿಯನ್ನು ವರದಿ ಮಾಡಿತ್ತು. ಇದರಿಂದಾಗಿ ಇತರ ಮಾಧ್ಯಮಗಳು ಮತ್ತು ಪೆÇಲೀಸರು ಕೂಡ ಇದರಿಂದ ತಪ್ಪು ದಾರಿ ಹಿಡಿಯುವಂತಾಗಿತ್ತು.

ಚಿಕ್ಕಮಗಳೂರಿನಲ್ಲಿ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚದ ಮುಖಂಡನ್ನು ಬಂಧಿಸಲಾಗಿದೆ. ಅದರೊಂದಿಗೆ, ಇದೇ ಪ್ರಕರಣಕ್ಕೆ ಸಂಬಂಧಿಸಿ ಬಡಗ ಕಜೆಕಾರಿನ ಯುವಕನೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಡಗಕಜೆಕಾರಿನ ಸಂತೋಷ ಪೂಜಾರಿ ಎಂಬಾತ ಬಾಲಕಿಗೆ ವಾಟ್ಸಪ್ ಮೂಲಕ ಮತ್ತು ಫೆÇೀನ್ ಮೂಲಕ ಕಿರುಕುಳ ನೀಡಿದಲ್ಲದೆ ಆಕೆಯ ಮಾನಹಾನಿ ಮಾಡಿದ್ದ.

ಇದೇ ರೀತಿಯ ಹಲವು ಪ್ರಕರಣಗಳು ಸೋಷಿಯಲ್ ಮಿಡಿಯಾದಲ್ಲಿ ಚರ್ಚೆ ಆಗುತ್ತಿದ್ದರೂ, ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ, ದಕ್ಷಿಣ ಕನ್ನಡ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಮಾದರಿಯಲ್ಲಿ ಮಂಗಳೂರು ಮತ್ತು ಉಡುಪಿ ಪೆÇಲೀಸರು ಕ್ರಮಕೊಳ್ಳುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.

ಈ ಮಧ್ಯೆ, ಸರಕಾರವೇ ಅಭಿವೃದ್ಧಿಪಡಿಸಿರುವ ಪ್ರವಾಸೋದ್ಯಮ ತಾಣ ಪಿಲಿಕುಳದಲ್ಲಿ ವಿದ್ಯಾರ್ಥಿಗಳ ಮೇಲೆ ಮಂಗಳೂರು ನಗರ ಪೆÇಲೀಸರ ಸಹಕಾರದೊಂದಿಗೆ ನಡೆದಿರುವ ಹಲ್ಲೆ ಮತ್ತು ಅನೈತಿಕ ಪೊಲೀಸಗಿರಿ ಕೂಡ ಬಿಜೆಪಿ ಕೃಪಾಫೆÇೀಷಿತ ಹಿಂದೂತ್ವವಾದಿ ಸಂಘಟನೆಗಳಿಗೆ ಭಾರೀ ಹಿನ್ನಡೆ ಉಂಟುಮಾಡಿದೆ. ಪಿಲಿಕುಳ ಪ್ರಕರಣದಲ್ಲಿ ಮಂಗಳೂರು ನಗರ ಪೆÇಲೀಸರ ವರ್ತನೆಗೆ ಕೂಡ ಭಾರೀ ಸಂಶಯಕ್ಕೆ ಕಾರಣವಾಗಿದೆ.

ಇದರೊಂದಿಗೆ, ಬಂಟ್ವಾಳದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರು ಮುಸ್ಲಿಮರರೊಂದಿಗೆ ಮಾತನಾಡಿದರು ಎಂದು ಪರಿವಾರ ಸಂಘಟನೆಯ ಗೂಂಡಾಗಳು ಅವರ ಮನೆಗೆ ಹೋಗಿ ಕಿರುಕುಳ ನೀಡಿದ್ದು ಕೂಡ ಸಾರ್ವಜನಿಕವಾಗಿ ತಪ್ಪು ಸಂದೇಶವನ್ನು ನೀಡಿದೆ.

ನಾಲ್ವರು ಮಹಿಳೆಯ ಮನೆಗೆ ನುಗ್ಗಿ ಅವಾಚ್ಯವಾಗಿ ನಿಂದಿಸಿರುವುದಲ್ಲದೆ ಮಹಿಳೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೆÇಲೀಸರು ನಾಲ್ವರಲ್ಲಿ ಇಬ್ಬರಾದ ರಮೇಶ ಮತ್ತು ಉಮೇಶ ಎಂಬಿಬ್ಬರನ್ನು ಬಂಧಿಸಿದ್ದಾರೆ.

ಕರಾವಳಿ, ಮಲೆನಾಡು ಮತ್ತು ರಾಜ್ಯದ ಇತರೆಡೆ ನಡೆಯುತ್ತಿರುವ ಇಂತಹ ಹಿಂದೂ ವಿರೋಧಿ ಘಟನೆಗಳಿಂದ ಭಾರತೀಯ ಜನತಾ ಪಾರ್ಟಿಗೆ ರಾಜಕೀಯವಾಗಿ ಲಾಭ ಆಗುವುದಕ್ಕಿಂತಲೂ ಹೆಚ್ಚು ನಷ್ಟ ಆಗುತ್ತಿದೆ. ಇಂತಹ ಸಮಾಜ ವಿರೋಧಿ ಶಕ್ತಿಗಳು ಹಿಂದೂ ಮಹಿಳೆಯರು ಮತ್ತು ಯುವತಿಯ ಮಾನ ಹರಣ ಮಾಡುವ ಮೂಲಕ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ ಎಂದು ಇದೀಗ ಜನರಾಡಿಕೊಳ್ಳುತ್ತಿದ್ದಾರೆ.

 

 

LEAVE A REPLY