ಡ್ಯಾನ್ಸಿನಲ್ಲಿ ರಣವೀರನನ್ನೇ ಸೋಲಿಸಿದ ರಾಮ್ ದೇವ್

ರಣವೀರ್ ಸಿಂಗ್ ಬಾಲಿವುಡ್ಡಿನಲ್ಲಿ ಅತೀ ಎನೆರ್ಜೆಟಿಕ್ ನಟ ಅಂದರೆ ತಪ್ಪÀಲ್ಲ. ಅವನನ್ನೇ ಡ್ಯಾನ್ಸ್ ಫೇಸಾಫಿನಲ್ಲಿ ಸೋಲಿಸಿದ್ದಾರೆ ಬಾಬಾ ರಾಮದೇವ್.
ಇದು ನಡೆದಿದ್ದು ಕೆಲವು ದಿನಗಳ ಹಿಂದಷ್ಟೇ `ಆಜ್‍ತಕ್’ ಟೀವಿಯವರು ಏರ್ಪಡಿಸಿದ ಶೋವೊಂದರಲ್ಲಿ. ರಣವೀರ್ ಸಿಂಗ್ ತನ್ನ `ಬೇಫಿಕ್ರೆ’ ಚಿತ್ರದ ಪ್ರಮೋಶನ್ನಿಗಾಗಿ ಆ ಶೋಗೆ ಹೋಗಿದ್ದ. ಬಾಬಾ ರಾಮ್ ದೇವ್ ಕೂಡಾ ಅಲ್ಲಿ ಉಪಸ್ಥಿರಿದ್ದರು. ರಣವೀರ್ ಬಾಬಾ ಅವರನ್ನು ತನ್ನ ಜೊತೆ ಡ್ಯಾನ್ಸ್ ಮಾಡಲು ಆಹ್ವಾನಿಸಿದ್ದಾನೆ. ರಾಮ್ ದೇವ್ ಮೊದಲು ನಿರಾಕರಿಸಿದರೂ ಒತ್ತಾಯಕ್ಕೆ ಮಣಿದು ರಣವೀರ್ ಜೊತೆ ಯೋಗ ರೀತಿಯಲ್ಲಿ ಡ್ಯಾನ್ಸ್ ಮಾಡಲು ಒಪ್ಪಿಕೊಂಡು ರಣವೀರನ ಮಲ್ಹಾರಿ ಹಾಗೂ `ಬೇಫಿಕ್ರೆ’ ಹಾಡಿಗೆ ಒಂದಾದ ಮೇಲೊಂದರಂತೆ ತನ್ನ ಯೋಗ ಸ್ಟೈಲಿನಲ್ಲಿ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ. ರಣವೀರನಿಗೆ ಅವರನ್ನು ಫಾಲೋ ಮಾಡಲೇ ಕಷ್ಟವಾಯಿತು. ಕೊನೆಯಲ್ಲಿ ರಣವೀರನನ್ನೇ ಎತ್ತಿ ರೌಂಡ್ ಹೊಡೆಸಿದಾಗಲಂತೂ ಅವನು ಸುಸ್ತೋ ಸುಸ್ತು. ಬಾಬಾರವರಿಗೆ ಉದ್ದಂಡ ನಮಸ್ಕರಿಸಿ ರಣವೀರ್ ತನ್ನ ಸೋಲೊಪ್ಪಿಕೊಂಡಾಗ ಸಭಿಕರಿಂದ ಭಾರೀ ಚಪ್ಪಾಳೆ.