ವಿಭಿನ್ನ ಗೆಟಪ್ಪಿನಲ್ಲಿ ಪರಿ

ಪರಿಣೀತಿ ಚೋಪ್ರಾ ಈಗ ಹೈ ಸ್ಪಿರಿಟಿನಲ್ಲಿದ್ದಾಳೆ. ಆಕೆ ಅಜಯ್ ದೇವಗನ್, ಅರ್ಷದ್ ವಾರ್ಸಿ ಮೊದಲಾದವರ ಜೊತೆ ನಟಿಸಿರುವ ರೋಹಿತ್ ಶೆಟ್ಟಿ ನಿರ್ದೇಶನದ `ಗೋಲ್ಮಾಲ್ ಅಗೈನ್’ ಸಿನಿಮಾ 200 ಕೋಟಿ ರೂ ಕ್ಲ್ಲಬ್ಬಿಗೆ ಸೇರಿದ್ದು ವರ್ಷದ ಬ್ಲಾಕ್ ಬಸ್ಟರ್ ಚಿತ್ರವೆನಿಸಿಕೊಂಡಿದೆ. ಅದೇ ಖುಶಿಯಲ್ಲಿರುವ ಪರಿ ಈಗ ಇನ್ನೊಂದು ವಿಭಿನ್ನ ಚಿತ್ರಕ್ಕೆ ರೆಡಿಯಾಗುತ್ತಿದ್ದಾಳೆ.

ಪರಿಣೀತಿ ಈಗ ದಿಬಾಕರ್ ಬ್ಯಾನರ್ಜಿಯವರ `ಸಂದೀಪ್ ಔರ್ ಪಿಂಕಿ ಫೆರಾರ್’ ಚಿತ್ರದಲ್ಲಿ ನಟಿಸುತ್ತಿದ್ದು ಚಿತ್ರದಲ್ಲಿಯ ಆಕೆಯ ಮೊದಲ ಲುಕ್ ಔಟ್ ಆಗಿದೆ. ಪರಿ ಇದರಲ್ಲಿ ವಿಭಿನ್ನ ಗೆಟಪ್ಪಿನಲ್ಲಿ ಮಿಂಚಲಿದ್ದಾಳೆ. ಸಿನಿಮಾದಲ್ಲಿಯ ಪಾತ್ರದ ಬಗ್ಗೆ ಮಾತಾಡುತ್ತಾ ಪರಿ “ಈ ಸಿನಿಮಾದಲ್ಲಿ ನಾನು ಮಹತ್ವಾಕಾಂಕ್ಷಿ ಕಾರ್ಪರೇಟ್ ಉದ್ಯಮಿಯ ಪಾತ್ರ ಮಾಡುತ್ತಿದ್ದೇನೆ. ದೆಹಲಿ ಮೂಲದ ಆಕೆಗೆ ವೃತ್ತಿ ಮೇಲಿರುವ ಅಪರಿಮಿತ ಆಸಕ್ತಿ ಜೊತೆಗೆ ತಾನು ಏನು ಸಾಧಿಸಬೇಕೆನ್ನುವ ಬಗ್ಗೆ ಆಕೆಯ ಫೋಕಸ್ ಎಲ್ಲವೂ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಲಿದೆ. ದಿಬಾಕರ್ ಬ್ಯಾನರ್ಜಿ ಇಲ್ಲಿಯವರೆಗೆ ನಾನು ಮಾಡಿರದ ಪಾತ್ರದಲ್ಲಿ ವಿಭಿನ್ನ ಗೆಟಪ್ಪಿನಲ್ಲಿ ನನ್ನನ್ನು ಈ ಚಿತ್ರದಲ್ಲಿ ತೋರಿಸಲಿದ್ದಾರೆ” ಎಂದು ಎಕ್ಸೈಟಿನಿಂದ ಮಾತಾಡುತ್ತಾಳೆ. ಈ ಸಿನಿಮಾದಲ್ಲಿ ಅರ್ಜುನ್ ಕಪೂರ್ ಪರಿ ಜೊತೆ ಲೀಡ್ ರೋಲಿನಲ್ಲಿ ನಟಿಸುತ್ತಿದ್ದಾನೆ.