ಡಿಜಿಟಲೀಕರಣ ಹಂತ ಹಂತವಾಗಿ ಜಾರಿಯಾಗಲಿ

ಸಾಮಾನ್ಯವಾಗಿ ವಿರೋಚಿತ ಶೈಲಿಯಲ್ಲಿ ಮಾತನಾಡುವ ಮೋದಿಯವರು ಕಳೆದ ಶನಿವಾರ ಸೌಮ್ಯವಾಗಿ ತಾವು ಹೇಳಬೇಕಾದುದ್ದನ್ನು ಹೇಳಿದ್ದಾರೆ. ಎಷ್ಟೇ ಸಂಕಷ್ಟವಿದ್ದರೂ ಸಹ ಜನಸಾಮಾನ್ಯರು ಆರ್ ಬಿ ಐ ಸೇರಿದಂತೆ ಎಲ್ಲ ಬ್ಯಾಂಕ್ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. ಕಾಳಸಂತೆಕೋರರೊಂದಿಗೆ ಸಹಕರಿಸಿದ ಕೆಲವು ಬ್ಯಾಂಕ್ ಸಿಬಂದಿಯನ್ನು ಸುಮ್ಮನೆ ಬಿಡದೆ ಕಠಿಣ ಶಿಕ್ಷೆ ವಿಧಿಸುವುದಾಗಿ ಹೇಳಿದ್ದಾರೆ. ಆದರೆ ತಮ್ಮದೇ ಖಾತೆಯಿಂದ ಹಣ ಪಡೆಯಲು ಬ್ಯಾಂಕುಗಳಲ್ಲಿ ವಾರಕ್ಕೆ 24,000 ರೂಪಾಯಿ ಮಿತಿ ಹೇರಿರುವುದನ್ನು ಸಡಿಲ್ಲ ಮಾಡಿಲ್ಲ. ಎಟಿಎಂಗಳಿಂದ ಹಿಂಪಡೆಯಬಹುದಾದ ಮಿತಿಯನ್ನು ನಾಲ್ಕೂವರೆ ಸಾವಿರ ರೂಪಾಯಿವರೆಗೆ ಮಾತ್ರ ಹೆಚ್ಚಿಸಿದ್ದಾರೆ. ಆದರೆ ಇದು ಸಾಕಾಗುವುದಿಲ್ಲ. ಡಿಜಿಟಲೀಕರಣ ಹಂತ ಹಂತವಾಗಿ ಜಾರಿಗೊಳಿಸಬೇಕು. ಕಪ್ಪು ಹಣ, ಖೋಟಾ ನೋಟು ಮತ್ತು ಭಯೋತ್ಪಾದನೆ ನಿಗ್ರಹಿಸುವಲ್ಲಿ ನೋಟು ಅಮೌಲ್ಯೀಕರಣ ಒಂದು ದಿಟ್ಟ ಹೆಜ್ಜೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಮೋದಿ ಅವರ ಮುಂದಿನ ಸರ್ಜಿಕಲ್ ಸ್ಟ್ರೈಕ್ ಪಕ್ಷಾತೀತವಾಗಿರಲಿ.

  • ಕೆ ಎಂ, ಪುತ್ತೂರು