ಹಿಂದೂ ವಾಹಿನಿಯಿಂದ (ಅ)ನೈತಿಕ ಗೂಂಡಾಗಿರಿ

ಮೀರತ್ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಸ್ಥಾಪಿತವಾಗಿರುವ ಹಿಂದೂ ಯುವ ವಾಹಿನಿ ಸಂಘಟನೆಯ ಕಾರ್ಯಕರ್ತರು ಬುಧವಾರದಂದು ನಗರದ ಶಾಸ್ತ್ರಿನಗರ ಪ್ರದೇಶದಲ್ಲಿರುವ ಮನೆಯೊಂದಕ್ಕೆ ದಾಳಿ ನಡೆಸಿ ಅಲ್ಲಿ ಯುವತಿಯೊಬ್ಬಳೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದನೆನ್ನಲಾದ ಮುಸ್ಲಿಮ್ ಯುವಕನೊಬ್ಬನಿಗೆ ಥಳಿಸಿದ್ದಾರೆ. ನಂತರ ಅವರ ಸ್ಥಳೀಯರೊಂದಿಗೆ ಸೇರಿ ವಾಸಿಂ ಹೆಸರಿನ ಆ ವ್ಯಕ್ತಿ ಮತ್ತು ಯುವತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವತಿಯನ್ನು ಎಚ್ಚರಿಕೆ ನೀಡಿ ನಂತರ ಬಿಡುಗಡೆಗೊಳಿಸಲಾಯಿತಾದರೂ ಮುಝಫ್ಫರನಗರ ನಿವಾಸಿ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.