ಕೊಲೆಕಾಡಿ ರೈಲ್ವೇ ಸೇತುವೆ ಬಳಿ ಯುವ ಜೋಡಿ ಸರಸ

ಸಾಂದರ್ಭಿಕ ಚಿತ್ರ

ತೀರಾ ಅಪಾಯಕಾರಿ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಅತಿಕಾರಿಬೆಟ್ಟು ಸಮೀಪದ ಕೊಲೆಕಾಡಿ ರೈಲ್ವೇ ಸೇತುವೆ ಬಳಿ ಸೋಮವಾರ ಮಧ್ಯಾಹ್ನದ ವೇಳೆಗೆ ಯುವ ಜೋಡಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದುದು ಸ್ಥಳೀಯರು ಪತ್ತೆ ಮಾಡಿದ್ದಾರೆ.

ಕೊಲೆಕಾಡಿ ಬಾಚಿಕಟ್ಟ ಸೇತುವೆಯ ಕೆಳ ಬದಿಯಲ್ಲಿ ಕಾಂಕ್ರೀಟ್ ಸ್ಲಾಬ್ ಬದಿಯಲ್ಲಿ ಸರಸವಾಡುತ್ತಿದ್ದ ಯುವ ಜೋಡಿಯನ್ನು ಕಂಡ ಸ್ಥಳೀಯರು, ಇವರು ಮುಲ್ಕಿ ಸಮೀಪದ ಗೇರುಕಟ್ಟೆ ಬಳಿಯ ನಿವಾಸಿಗಳು ಎಂದು ಗುರುತಿಸಿದ್ದಾರೆ. ಬಳಿಕ ಜೋಡಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ತೀರಾ ಅಪಾಯಕಾರಿ ಕೊಲೆಕಾಡಿ ಬಾಚಿಕಟ್ಟ ರೈಲ್ವೇ ಕಿರು ಸೇತುವೆ ಬಳಿ ಈಗಾಗಲೇ ರೈಲು ಡಿಕ್ಕಿಯಾಗಿ ಹಲವಾರು ಮಂದಿ ಸಾವನ್ನಪ್ಪಿದ್ದು, ಪೊಲೀಸರು ಸೂಕ್ತ ಬಂದೋಬಸ್ತ್ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.