iÉೂೀಧಳಾದ ಸನ್ನಿ

ಸನ್ನಿ ಲಿಯೋನ್ ಈಗ ತೆಲುಗಿನಲ್ಲಿ `ವೀರಮಾದೇವಿ’ ಎನ್ನುವ ಸಿನಿಮಾದಲ್ಲಿ ಅಭಿನಯಿಸಲಿದ್ದು ಚಿತ್ರದಲ್ಲಿ ಆಕೆ ಓರ್ವ ಯೋಧಳಾಗಿ ಸೆಣೆಸಾಡಲಿದ್ದಾಳೆ. ಇದು ಸನ್ನಿಯ ಮೊದಲ ತೆಲುಗು ಚಿತ್ರವಾಗಿದ್ದು ಈಗಾಗಲೇ ಚೆನ್ನೈನಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಿದೆ. ಈ ಸಿನಿಮಾವನ್ನು ತಮಿಳು ಹಾಗೂ ಮಲೆಯಾಳಂನಲ್ಲೂ ಬಿಡುಗಡೆ ಮಾಡಲು ನಿರ್ಮಾಪಕರು ಯೋಚಿಸುತ್ತಿದ್ದಾರೆ.

ಸನ್ನಿಯ ಬಗ್ಗೆ ಸೌತ್‍ದಲ್ಲೂ ಭಾರೀ ಕ್ರೇಜ್ ಇದ್ದು ಆಕೆ ಹೊಸ ವರ್ಷಾಚರಣೆ ದಿನ ಬೆಂಗಳೂರಿನಲ್ಲಿ ಕುಣಿಯುವವಳಿದ್ದಳು. ಆದರೆ ಇದಕ್ಕೆ ಕನ್ನಡ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಹೊಸ ವರ್ಷದ ಹಿನ್ನೆಲೆಯಲ್ಲಿ ಭದ್ರತೆಯ ಕಾರಣ ನೀಡಿ ಪೆÇಲೀಸರು ಕಾರ್ಯಕ್ರಮಕ್ಕೆ ಅನುಮತಿ ನೀಡಿರಲಿಲ್ಲ. ಇದೀಗ ಕನ್ನಡ ಚಿತ್ರವೊಂದರಲ್ಲಿ ಆಕೆ ಪೂರ್ಣ ಪ್ರಮಾಣದ ನಾಯಕಿಯಾಗಲಿದ್ದಾಳೆ ಎನ್ನುವ ಸುದ್ದಿಯೂ ಇದೆ.

 

LEAVE A REPLY