45 ಬಾಟಲಿ ಮದ್ಯಸಹಿತ ಒಬ್ಬ ಸೆರೆ : ಚಾಲಕ ಪರಾರಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಬಿವರೇಜಸ್ ಕಾರ್ಪರೇಶನ್ನಿನ ಮದ್ಯದಂಗಡಿಯಿಂದ ಮದ್ಯ ಖರೀದಿಸಿ ಅಗತ್ಯವುಳ್ಳವರಿಗೆ ವಿತರಿಸುತಿದ್ದ ಕೇರಳ ಸಾರಿಗೆ ಬಸ್ಸು ಚಾಲಕನನ್ನು ಪೆÇಲೀಸರು ಸೆರೆ ಹಿಡಿಯಲು ನಡೆಸಿದ ಪ್ರಯತ್ನ ವಿಫಲಗೊಂಡಿದೆ. ಆದರೆ ಮಧ್ಯ ಪಡೆಯಲು ಬಂದ ವ್ಯಕ್ತಿ ಸೆರೆಗೀಡಾಗಿದ್ದಾರೆ.

ಕಾಞಂಗಾಡ್ ರಾವಣೇಶ್ವರ ಪೂಞರ್ ನಿವಾಸಿ ಅನಿಲ್ ಕುಮಾರ್ (46) ಸೆರೆಗಿಡಾದ ವ್ಯಕ್ತಿ. ಇದೇ ಸಂದರ್ಭ ಕೇರಳ ಸಾರಿಗೆ ಬಸ್ಸಿನ ಕಾಸರಗೋಡು ಡಿಪೆÇೀದ ಚಾಲಕ ಉಪೇಂದ್ರನ್ ಪರಾರಿಯಾಗಿದ್ದಾನೆ.ಬಂಧಿತ ಅನಿಲಕುಮಾರನಿಂದ 45 ಬಾಟ್ಲಿ ಮದ್ಯ ವಶಪಡಿಸಲಾಗಿದೆ.

ಉಪೇಂದ್ರನ್ ಮದ್ಯ ಸಾಗಿಸುತ್ತಿರುವ ಬಗ್ಗೆ ಪೆÇಲೀಸರಿಗೆ ಸೂಚನೆ ಲಭಿಸಿತ್ತು. ಬಿವರೇಜಸ್ ಮದ್ಯದಂಗಡಿಯಿಂದ ಬೇರೆ ವ್ಯಕ್ತಿಗಳು ಮದ್ಯವನ್ನು ಉಪೇಂದ್ರಗೆ ನೀಡುತಿದ್ದು, ಅದನ್ನು ಆತ ಅಗತ್ಯವುಳ್ಳವರಿಗೆ ಹಸ್ತಾಂತರಿಸುತಿದ್ದನೆನ್ನಲಾಗಿದೆ. ಈ ಬಗ್ಗೆ ಹಲವು ಸಲ ಅಬಕಾರಿ ಪೆÇಲೀಸರು ಉಪೇಂದ್ರನ ಮನೆಗೆ ದಾಳಿ ನಡೆಸಿದ್ದರೂ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಅನಂತರವೂ ಉಪೇಂದ್ರನ್ ಮದ್ಯ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದಾಗ ಉಪೇಂದ್ರನ್ 45 ಬಾಟ್ಲಿ ಮದ್ಯ ಹಸ್ತಾಂತರಿಸುತ್ತಿದ್ದಾಗ ಮದ್ಯ ಪಡೆದಾತ ಮಾತ್ರ ಸೆರೆಯಾಗಿದ್ದು ಕೊಟ್ಟಾತ ಉಪೇಂದ್ರನ್ ಪರಾರಿಯಾಗಿದ್ದಾನೆ. ಸೆರೆಗೀಡಾದ ಅನಿಲಕುಮಾರನನ್ನು ಪೆÇಲೀಸರು ತನಿಖೆಗೊಳಪಡಿಸಿದಾಗ ವಿಷಯ ಎಲ್ಲಾ ಬಹಿರಂಗಗೊಂಡಿದೆ.