ಅಕ್ರಮ ಮದ್ಯ ವಶ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪೆರ್ಲ ಪೇಟೆಯಲ್ಲಿ ಮದ್ಯ ಸಹಿತ ಒಬ್ಬನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

ಪೆÇಯಿನಾಚಿ ಬಳಿಯ ಬಟ್ಟತ್ತೂರು ನಿವಾಸಿ ಸತೀಶ್ (31) ಎಂಬಾತ ಸೆರೆಯಾದ ವ್ಯಕ್ತಿಯಾಗಿದ್ದಾನೆ. ಈತನ ಕೈಯಲ್ಲಿದ್ದ 375 ಮಿಲಿ ಲೀಟರಿನ 30 ಬಾಟ್ಲಿ ಕರ್ನಾಟಕ ನಿರ್ಮಿತ ಮದ್ಯವನ್ನು ಅಬಕಾರಿದಳ ವಶಪಡಿಸಿಕೊಂಡಿದೆ. ಬುಧವಾರ ಸಂಜೆ ಸತೀಶ್ ಪೂತ್ತೂರು ಭಾಗದಿಂದ  ಬಸ್ಸಿನಲ್ಲಿ ಬಂದು ಪೆರ್ಲ ಪೇಟೆಯಲ್ಲಿ ನಿಂತಿದ್ದ ವೇಳೆ ಬದಿಯಡ್ಕ ರೇಂಜ್ ಅಬಕಾರಿ ಅಧಿಕಾರಿಗಳು ಆತನ ತಪಾಸಣೆ ನಡೆಸಿದಾಗ ಮದ್ಯ ಪತ್ತೆಯಾಗಿದೆ.