ಅಕ್ರಮ ಮದ್ಯ ಪತ್ತೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಸೀತಾಂಗೋಳಿಯಲ್ಲಿ ಕಿರು ಸಂಕದಡಿಯಲ್ಲಿ ಬಚ್ಚಿಡಲಾದ 20 ಬಾಟಲಿ ಮದ್ಯವನ್ನು ಕಾಸರಗೋಡು ರೇಂಜ್ ಅಬಕಾರಿ ಅಧಿಕಾರಿಗಳು ವಶಪಡಿಸಿದ್ದಾರೆ.
180 ಮಿಲಿಯ 20 ಬಾಟಲಿ ಗೋವಾ ಮದ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ಬಚ್ಚಿಟ್ಟಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕಾಸರಗೋಡು ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.