ಅಕ್ರಮವಾಗಿ ಸಂಗ್ರಹಿಸಿದ್ದ ಮರಳು ವಶ

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ತಾಲೂಕಿನ ಕುಳಕೋಡದ ಶರಾವತಿ ಕೋಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 9,000 ಮೌಲ್ಯದ ಮರಳು ಹಾಗೂ ಸಾಗಾಟಕ್ಕೆ ಬಳಸಲಾದ 2 ಯಾಂತ್ರೀಕೃತ ದೋಣಿಗಳನ್ನು ಭಟ್ಕಳ ಉಪವಿಭಾಗಾಧಿಕಾರಿ ಎನ್ ಎಂ ಮಂಜುನಾಥ ನೇತೃತ್ವಲ್ಲಿ ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

ಕುಳಕೋಡದ ವೆಂಕಟ್ರಮಣ ದತ್ತ ವೆಂಕಟ್ರಮಣ ಹೆಗಡೆ ಎಂಬುವರ ಮಾಲ್ಕಿ ಜಾಗದಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟಿದ್ದರು. ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳ ತಂಡ ಮಂಗಳವಾರ ಸಂಜೆ ಭೇಟಿ ನೀಡಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ದೋಣಿ ಮಾಲಿಕರು ಹಾಗೂ ಕಾರ್ಮಿಕರು ಪರಾರಿಯಾಗಿದ್ದು ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಮರಳು ಸಾಗಾಟಕ್ಕೆ ಬಳಸಲಾದ ಲಕ್ಷಾಂತರ ಮೌಲ್ಯದ 2 ದೋಣಿಗಳು ಹೊನ್ನಾವರ ಪೊಲೀಸರ ವಶದಲ್ಲಿದ್ದು, ಮರಳು ಸಂಗ್ರಹಣಾ ಜಾಗದ ಮಾಲೀಕ ವೆಂಕಟ್ರಮಣ ದತ್ತ ವೆಂಕಟ್ರಮಣ ಹೆಗಡೆ ಹಾಗೂ ದೋಣಿ ಮಾಲಿಕನ ವಿರುದ್ಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಅನಧಿಕೃತ ಮರಳು ವಶ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ತಲಪಾಡಿ ಭಾಗದಿಂದ ಕಾಸರಗೋಡು ಕಡೆ ಅನಧಿಕೃತವಾಗಿ ಸಾಗಿಸಲಾಗುತಿದ್ದ ಮೂರು ಲೋಡ್ ಮರಳನ್ನು ಮಂಜೇಶ್ವರ ಪೆÇಲೀಸರು ವಶಕ್ಕೆ ತೆಗೆದಿದ್ದಾರೆ.

ಪೆÇಸೋಟು ಹಾಗೂ ಹೊಸಂಗಡಿ ಭಾಗದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಒಬ್ಬ ಲಾರಿ ಚಾಲಕ ಓಡಿ ಪರಾರಿಯಾಗಿದ್ದಾನೆ. ಮತ್ತಿಬ್ಬರು ಚಾಲಕರಾದ ಆರಿಕ್ಕಾಡಿ ನಿವಾಸಿ ಎ ಕೆ ಅಬ್ದುಲ್ಲ (40) ಹಾಗು ಬಂಟ್ವಾಳ ನಿವಾಸಿ ಗಾದಾರಿಬೇಡಿ (34) ಎಂಬವರಿಗೆ ನೋಟೀಸು ನೀಡಲಾಗಿದೆ.