ಅಕ್ರಮ ಮರಳು ಸಾಗಾಟ ಪತ್ತೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಆಡಂಕುದ್ರು ಬಳಿಯಿಂದ ತೊಕ್ಕೊಟ್ಟು ಕಡೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ಉಳ್ಳಾಲ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪೆರ್ಮನ್ನೂರು ಗ್ರಾಮದ ಕಲ್ಲಾಪು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆಯ ಬದಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 66ರ ಅಡಂಕುದ್ರು ಕಡೆಯಿಂದ ತೊಕ್ಕೊಟು ಕಡೆಗೆ ಲಾರಿಯಲ್ಲಿ ಎಲ್ಲಿಂದಲೋ ಕಳವು ಮಾಡಿಕೊಂಡು ಬಂದಿರುವ ಸಾಮಾನ್ಯ ಮರಳನ್ನು ತುಂಬಿಸಿ ಅಕ್ರಮ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಲಾರಿ ಚಾಲಕ ರೋಹಿತಾಕ್ಷ ಎಂಬಾತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಒಟ್ಟು 5,000ರೂ. ಮೌಲ್ಯದ ಸಾಮಾನ್ಯ ಮರಳು ಹಾಗೂ ರೂ 5 ಲಕ್ಷ ರೂ ಮೌಲ್ಯದ ಲಾರಿಯನ್ನು ವಶಪಡಿಸಿಕೊಂಡು ಆರೋಪಿ ಲಾರಿ ಚಾಲಕ ಹಾಗೂ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.